ಜುಲೈ 10, ರಂದು ಬೆಳಗಾವಿಯಲ್ಲಿ ವಿಭಾಗ ಮಟ್ಟದ ಅಭಿನಯ ಸಮೇತ ರಂಗ ಸಂಗೀತ ತರಬೇತಿ ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಜರಗಲಿದೆ.
ಕರ್ನಾಟಕ ಸರ್ಕಾರ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಬೆಳಗಾವಿ ವಿಭಾಗದ ರಂಗಾಸಕ್ತರಿಗಾಗಿ ವಿಭಾಗ ಮಟ್ಟದ ಅಭಿನಯ ಸಮೇತ ರಂಗ ಸಂಗೀತ ತರಬೇತಿ ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿರುವ ಯುವ ಕಲಾವಿದರಿಗೆ ಅಭಿನಯ, ರಂಗ ಸಂಗೀತ, ಸ್ವರ ಸಂಸ್ಕರಣೆ ಹಾಗೂ ರಂಗಗೀತೆಗಳ ಪ್ರಾಯೋಗಿಕ ತರಬೇತಿಯನ್ನು ಅನುಭವಿ ತರಬೇತುದಾರರಿಂದ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಶಿಷ್ಯ ವೇತನ ಜೊತೆಗೆ ಪ್ರಮಾಣಪತ್ರವನ್ನು ವಿತರಿಸಲಾಗುವುದು. 18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳಿಗೆನೇರ ಸಂದರ್ಶನವನ್ನುಜುಲೈ…
