ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ ಕಳೆದುಹೋದ ಮೊಬೈಲನ್ನು ಮಾಲೀಕರಿಗೆ ಹಿಂತಿರುಗಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ರಾಮದುರ್ಗ ಪೊಲೀಸ್ ಠಾಣೆ ಆವರಣಗಳಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ CEIR ಪೋರ್ಟಲ್ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ತಂತ್ರಜ್ಞಾನದ ನೆರವಿನಿಂದ ಈ ಮೊಬೈಲ್ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡಿ, ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.CEIR ಪೋರ್ಟಲ್ ಈಗ ಅಟೋ ಜನರೇಟಾಗಿ ನಮಗೆ ಈ ಮೊಬೈಲ್ ಒಳಗೆ ಇಂತಹ ನಂಬರ್ ಇದೆ ಎಂದು ತೋರಿಸುತ್ತದೆ . ಈ ಮೊಬೈಲ್ ಕಳ್ಳತನ ಮಾಡಿದವರು ಯಾರಿಗೋ…
