ಮಲಪ್ರಭಾ ಅಚ್ಚುಕಟ್ಟುಪ್ರದೇಶದ ಕಾಲುವೆಗಳಿಗೆ ನೀರು ಬಿಡಲು ನಿರ್ಧಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ
ಬೆಳಗಾವಿ ಮಲಪ್ರಭಾ ಜಲಾಶಯದಲ್ಲಿ ಸದ್ಯ 25 ಟಿಎಂಸಿ ನೀರು ಸಂಗ್ರಹವಿದ್ದು, ಜನ ಜಾನುವಾರುಗಳಿಗೆ ಮುಂದಿನ ಜುಲೈವರೆಗೂ ಕುಡಿಯಲು 20 ಟಿಎಂಸಿ ನೀರು ಮೀಸಲಿರಿಸಿ, ಉಳಿದಂತಹ 4.5 ಟಿಎಂಸಿ ನೀರನ್ನು ಬೆಳೆದ ಬೆಳೆಗಳಿಗೆ ಅನುಕೂಲವಾಗುವಂತೆ ಜುಲೈ 18 ರಿಂದ 17 ದಿನಗಳವರೆಗೆ ಮಲಪ್ರಭಾ ಅಚ್ಚುಕಟ್ಟುಪ್ರದೇಶದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬೆಳಗಾವಿ ಉತ್ತರ ವಲಯದ…
