ಲೋಕಾಪೂರ ದಿಂದ ಧಾರವಾಡ ರೈಲ್ವೆ ಮಾರ್ಗಕ್ಕಾಗಿ ಪೂರ್ವಭಾವಿ ಸಭೆ

ಬಾಗಲಕೋಟ ಜಿಲ್ಲೆ ಲೋಕಾಪೂರದ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗ ಯೋಜನೆಯು ಅನುಷ್ಠಾನಗೊಳ್ಳಲೇ ಬೇಕು. ಇಲ್ಲವಾದರೆ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಖಾಜಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕರ ಬೇಡಿಕೆಯಾದ ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗಕ್ಕಾಗಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಲೋಕಾಪೂರ ಪಟ್ಟಣದ ಶ್ರೀ ಶಂಭುಲಿಂಗ ಮಠದಲ್ಲಿ ಹಿರಿಯ ನಾಗರಿಕರ ಸೇವಾ ಸಂಘದ ವತಿಯಿಂದ ಪೂರ್ವಭಾವಿ…

Read More

ರಾಮದುರ್ಗ ಡಿ.13 ರಂದು ರಾಷ್ಟ್ರೀಯ ಲೋಕ ಅದಾಲತ್ ರಾಜೀ ಸಂಧಾನದ ಮೂಲಕ ಪ್ರಕರಣಗಳು ಅತೀ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಸುವರ್ಣಾವಕಾಶವಾಗಿದೆ

ಬೆಳಗಾವಿ ಜಿಲ್ಲೆ ರಾಮದುರ್ಗ ನ್ಯಾಯಾಲಯ ಆವರಣಗಳಲ್ಲಿಡಿಸೆಂಬರ್ 13 -2025 ರಂದು ರಾಷ್ಟ್ರೀಯ ಲೋಕ್ ಅದಾಲತ್ಗಳನ್ನು ಆಯೋಜಿಸಲಾಗಿದೆ, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಅಂದು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಅತೀ ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ . ಲೋಕ ಅದಾಲತ್ನಲ್ಲಿ ಈ ಕೆಳಗಿನ ರೀತಿಯ ಪ್ರಕರಣಗಳನ್ನು ಒಪ್ಪಿಕೊಳ್ಳಬಹುದು. [ 11 ] ಸಂಕೀರ್ಣಗೊಳಿಸಬಹುದಾದ ಕ್ರಿಮಿನಲ್ ಅಪರಾಧಗಳು.ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಪ್ರಕರಣಗಳು.ಹಣದ ಮರುಪಾವತಿಗೆ ಸಂಬಂಧಿಸಿದ…

Read More

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಲ್ಲಾಪುರ ಪೋಷಕ – ಶಿಕ್ಷಕ ಮಹಾಸಭೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಬಸಪ್ಪ ಅಳಗೋಡಿ ಅವರು ಅಧ್ಯಕ್ಷತೆ ವಹಿಸಿದ್ದರು….. ಅತಿಥಿಗಳಾಗಿ ಹೂಲಿಕಟ್ಟಿ ಕ್ಲಸ್ಟರ್ನ ಸಿಆರ್ಪಿಗಳಾದ ಎಸ್.ಎಂ ಕುಂಬಾರ ಸರ್ ಅವರು ಭಾಗವಹಿಸಿದ್ದರು. ಅತಿಥಿಗಳಾಗಿ ಸಿಎಸ್‌ಸಿ ಸಮಿತಿಯ ಸದಸ್ಯರಾದ ಶ್ರೀ ಕೆ ಸಿ ಕಣವಿರವರು ಹಾಗೂ ಶಾಲೆಯ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಭಾಗವಹಿಸಿದ್ದರು. ಶಾಲೆಯ ಪ್ರಧಾನ ಗುರುಗಳಾದ ಪಿ.ಎಂ ದೀಕ್ಷಿತ್ ಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಲ್ಲಿ ಪೋಷಕ ಶಿಕ್ಷಕ ಕಾರ್ಯಕ್ರಮದ ಮಹತ್ವವನ್ನು…

Read More

ಶಿರಸಂಗಿ : ಶಿಥಿಲಗೊಂಡ ಕಾಲುವೆ ದುರಸ್ತಿಗಾಗಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿಮಲಪ್ರಭಾ ಬಲದಂಡೆ 11ನೇ ಕಿಲೊ ಮಿ 7R ಕಾಲುವೆ ಒಡೆದು ರೈತರಿಗೆ ನೀರು ಬರದೆ ಇದ್ದ ಕಾರಣ ಕಾಲುವೆ ದುರಸ್ತಿಗಾಗಿ ಶಿರಸಂಗಿ ಗ್ರಾಮದ ಲಿಂಗರಾಜ ಸರ್ಕಲ್ ನಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ ಮಾಡಿದರು. ಸುಮಾರು ಮೂರು ತಿಂಗಳು ಕಳೆದರೂ ಕೂಡ ಕಾಲುವೆ ದುರಸ್ತಿ ಮಾಡದೆ ಹಾಗೆ ಬಿಟ್ಟಿರುತ್ತಾರೆ ಇದರ ಬಗ್ಗೆ ಸಾಕಷ್ಟು ಬಾರಿ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಇದುವರೆಗೂ ದುರಸ್ತಿ ಮಾಡದೆ ಇರುವ ಕಾರಣ…

Read More

ಸರ್ಕಾರಿ ಪ್ರೌಢಶಾಲೆ ಕಗದಾಳದಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ “ಶಿಕ್ಷಕ-ಪೋಷಕರ ಮಹಾಸಭೆ” ಕಾರ್ಯಕ್ರಮ.

ಪಾಲಕರು ಶಿಕ್ಷಕರ ಜೊತೆ ಕೈ ಜೋಡಿಸಿದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಉತ್ತುಂಗಕ್ಕೆ ಒಯ್ಯಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೃಷ್ಣರಡ್ಡಿ ಹ ಸವದತ್ತಿರವರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರಿ ಪ್ರೌಢಶಾಲೆ ಕಗದಾಳದಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ “ಶಿಕ್ಷಕ-ಪೋಷಕರ ಮಹಾಸಭೆ” ಉದ್ಘಾಟಿಸಿ ಪಾಲಕರು ತಮ್ಮ ಮಕ್ಕಳನ್ನು ಕೇವಲ ಶಾಲೆಗೆ ದಾಖಲು ಮಾಡಿ ಕೈ ತೊಳೆದುಕೊಳ್ಳದೇ ,ಶಾಲೆ ಮತ್ತು ಶಿಕ್ಷಕರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು, ಮಕ್ಕಳ ಪ್ರಗತಿಗೆ ಕೈಜೋಡಿಸಲು ಕರೆನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್…

Read More

ಆದರ್ಶ ವಿದ್ಯಾಲಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ.

ಸವತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಎ. ಖಾಜಿ. ನೇತೃತ್ವದಲ್ಲಿ ಮುಖ್ಯ ಶಿಕ್ಷಕರಾದ ಆರ್ ಎಫ್ ಮಾಗಿ, ಶಾಲಾ ಎಸ್‌ಡಿಎಂಸಿಯ ಅಧ್ಯಕ್ಷರಾದ ಸುರೇಶ್ ಕಾಳಪ್ಪನವರ್ ,, ಶಿಕ್ಷಣ ಸಂಯೋಜಕರು ಹಾಗೂ ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಸುಧೀರ. ವಾಘೇರಿ ,ಎಸ್ ಎಸ್ ಎಲ್ ಸಿ ವರ್ಗದ ಶಿಕ್ಷಕರಾದ ಪ್ರವೀಣ್ ಬನಕಾರ್ , ಶ್ರೀಮತಿ ಚೈತ್ರಾ ಕೆ ಜಿ. ಹಾಗೂ ಶಿಕ್ಷಕರಾದ ಐ ಬಿ ನೇಸರಗಿ , ಉಮೇಶ್ ನರಗುಂದ, ಪ್ರಸನ್ನ ಹೆಗಡೆ ರವರು ಸವದತ್ತಿಯ…

Read More

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸರ್ಕಾರದ ಆದೇಶದಂತೆ ಕಬ್ಬಿನ ದರ ನೀಡಲು ಮನವಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಲೀಜ್ ಪಡೆದ ಪ್ಯಾರಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿ ಶಿವಸುಬ್ರಮನಿಯನ್ ಅವರಿಗೆಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು 1 ಟನ್ನ ಕಬ್ಬಿಗೆ ಸರಕಾರದ ಘೋಷಿಸಿದ ಆದೇಶದ ದರದಂತೆ ಹೆಚ್ಚುವರಿ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಈಗಗಾಲೇ ಇಂಚಗೇರಿ ಮಠಧ ಶ್ರೀ ಶಶಿಕಾಂತ ಗುರುಗಳ ನೇತೃತ್ವದಲ್ಲಿ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಸಿದ ಪ್ರತಿಭಟನೆಗೆ…

Read More

ರೈತಪರ ಹೋರಾಟಕ್ಕೆ ಸವದತ್ತಿ ವಕೀಲರ ಸಂಘದಿಂದ ಬೆಂಬಲ :

ಸವದತ್ತಿಯ ಪಟ್ಟಣದ ಕರಿಕಟ್ಟಿ ಕ್ರಾಸ್ ಬಳಿಯಲ್ಲಿ ರೈತ ಸಂಘಟನೆ ಹಾಗೂ ವಕೀಲರ ಸಂಘ ಸವದತ್ತಿ ಮತ್ತು ವಿವಿಧ ಸಂಘಟನೆಗಳ ಸಂಯೋಗದಲ್ಲಿ ಕಬ್ಬಿನ ಬೆಲೆಯ ನಿಗದಿಪಡಿಸುವ ಸಲುವಾಗಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಸೌದತ್ತಿಯ ವಕೀಲರ ಸಂಘದಿಂದ ಸರ್ವ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟಿಸಲಾಯಿತು ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ, ಮತ್ತು ಹಿರಿಯ ವಕೀಲರಾದ ಶ್ರೀ…

Read More

ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಕನಕದಾಸರ 538 ನೆಯ ಜಯಂತಿ

ನಮ್ಮ ನಾಡು ಕಂಡ ಶ್ರೇಷ್ಠ ದಾರ್ಶನಿಕ,ಕವಿ,ಸಂತ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಹ ಸವದತ್ತಿ ಕರೆನೀಡಿದರು. ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಕನಕದಾಸರ 538 ನೆಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿರುವ ಜಾತೀಯತೆ, ತಾರತಮ್ಯ ಹೋಗಲಾಡಿಸಲು ಕನಕದಾಸರ ಪಟ್ಟ ಪ್ರಯತ್ನ ಅವಿಸ್ಮರಣೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ ಭಾರತದಲ್ಲಿ ಆಗಿ ಹೋದ ಶ್ರೇಷ್ಠ ಸಮಾಜ ಸುಧಾರಕರ ಸಾಲಿನಲ್ಲಿ ಕನಕದಾಸರು ಅಗ್ರಗಣ್ಯರು.ಸಾಹಿತ್ಯ ಕ್ಷೇತ್ರಕ್ಕೆ ಸುಮಾರು…

Read More

ಸುರೇಬಾನ ಟ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಇಲ್ಲಿಏನು ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನದ ಪ್ರದರ್ಶನ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳಿಂದಲೇ ದಂಧೆಕೋರರಿಗೆ ಸಾಥ್ ಸಿಗುತ್ತಿದೆಯೋ ?ಸುರೇಬಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಗಳು ರಾಜಾರೋಷವಾಗಿ ಹಾದು ಹೋಗುತ್ತಿವೆ.ಅಕ್ರಮ ಮರಳು ದಂಧೆ ರಾಜಾರೋಷವಾಗಿ ಸುರೇಬಾನ, ಕಿತ್ತೂರು, ಜಾಲಿಕಟ್ಟಿ, ಕಲ್ಲೂರು, ಮುಳ್ಳೂರು ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಹಳ್ಳದಲ್ಲಿ…

Read More