ಕಾಂಗ್ರೆಸ್ ಮಾತ್ರ ಶೋಷಿತರ ರಕ್ಷಣೆ ಮಾಡುತ್ತದೆ : ಜ್ಯೋತಿ ಗೊಂಡಬಾಳ
ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಎಂಬ ಗ್ಯಾರಂಟಿಗಳ ಮೂಲಕ ಹಿಂದುಳಿದ, ಬಡವರ ಕಲ್ಯಾಣ ಮತ್ತು ಬದುಕಿಗೆ ಶಕ್ತಿ ನೀಡಿದ ಸಿದ್ದರಾಮಯ್ಯ ಸರಕಾರಕ್ಕೆ ಮತ್ತಷ್ಟು ಶಕ್ತಿ ನೀಡಲು ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಅಂತಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಯಲ್ಲಿ ಸಿದ್ದರಾಮಯ್ಯ ಅವರು…
