ಹಸು ಮಾರಿ ₹32,340 ಶುಲ್ಕ ಪಾವತಿ I 16,370 ಪುಟ ಸಂಗ್ರಹ ಎತ್ತಿನ ಬಂಡಿಯಲ್ಲಿ ಆರ್‌ಟಿಐ ದಾಖಲೆ!
ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಕಡತಗಳನ್ನು ಎತ್ತಿನ ಬಂಡಿ ಯಲ್ಲಿ ತುಂಬಿಕೊಂಡು ಕೊಂಡೊಯ್ದ ಅಪರೂಪದ ಪ್ರಸಂಗ ಬುಧವಾರ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಬಸವನಹಳ್ಳಿ ಕೊಪ್ಪಲಿನ ಬಿ.ಎಸ್.ರವಿ ಕಾಳೇನಹಳ್ಳಿ ಗ್ರಾಮ ಪಂಚಾಯತಿಯಿಂದ 2020ರಿಂದ 2025ರ ವರೆಗೆ 15ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ಕ್ರಿಯಾ ಯೋಜನೆ ಪಟ್ಟಿ, ಜಿಪಿಎಸ್ ಸಹಿತ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪಿಡಿಒ…
