ಸುಂದರ ಕಾಂಡ ಹನುಮಾನ್ ಚಾಲೀಸಾ ವಾರ್ಷಿಕೋತ್ಸವದ ಕಾರ್ಯಕ್ರಮ ಯಶಸ್ವೀ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಂದರ ಕಾಂಡ,ಹನುಮಾನ್ ಚಾಲೀಸಾ ವಾರ್ಷಿಕೋತ್ಸವ ಅತೀ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜರಗಿತು. ಈ ಕಾರ್ಯಕ್ರಮವು ಸಾಮೂಹಿಕ ಹನುಮಾನ್ ಚಾಲೀಸಾ ಪಟನೆಯೊಂದಿಗೆ ಪ್ರಾರಂಭವಾಗಿ ನಂತರ 108 ಬಾರಿ ರಾಮ್ ನಾಮ ಜಪಿಸಿ ಪುಷ್ಪರ್ಚನೆ ತುಳಸಿ ಅರ್ಚನೆ ಮಾಡುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಈ ಸಂದರ್ಭದಲ್ಲಿ ಸತ್ಸಂಗ ಪ್ರಮುಖರಾದ್ ವಿಜೇಯಂದ್ರ ಜೋಶಿ ಮಾತನಾಡಿ ನಮ್ಮ ರಾಮದುರ್ಗದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ…
