ಬೈಕ್ ಮತ್ತು ಟಾಟಾ ಗುಡ್ಸ್ ವಾಹನ ಮಧ್ಯ ಭೀಕರ ರಸ್ತೆ ಅಪಘಾತ ಇಬ್ಬರ ಬೈಕ್ ಸವರಾರು ಸ್ಥಳದಲ್ಲಿ ಸಾವು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಹತ್ತಿರ ಬೈಕ್ ಮತ್ತು ಟಾಟಾ ಗುಡ್ಸ್ ವಾಹನ ಮಧ್ಯ ಭೀಕರ ರಸ್ತೆ ಅಪಘಾತ ಇಬ್ಬರ ಬೈಕ್ ಸವರಾರು ಸ್ಥಳದಲ್ಲಿ ಸಾವು. ಶಿವಾನಂದ ಹೊಳೆಬಸಪ್ಪ ಖಾನಾಪುರ ಸಾಕಿನ ಆನೆಗುದ್ದಿ ಮತ್ತು,ಮಲ್ಲಪ್ಪ ಹಣಮಂತ ಕೌಜಲಗಿ ಸಾಕಿನ ಆನೆಗುದ್ದಿ ಈವರಿಬ್ಬರು ಆನೆಗುದ್ದಿಯಿಂದ ಬಜಾಜ್ ಡಿಸ್ಕವರಿ ಬೈಕನಲ್ಲಿ ವಿದ್ಯಾರ್ಥಿನಿ, ಸೌಂದರ್ಯ ಮಲ್ಲಪ್ಪ ಕೌಜಲಗಿ ಈವರಿಗೆ CET ಪರೀಕ್ಷೆಗೆಯಂದು ಕರೆದುಕೊಂಡು ಲೋಕಾಪುರಕ್ಕೆ ಹೋಗುವ ಸಂಧರ್ಭದಲ್ಲಿ ಬಟಕುರ್ಕಿ ಹತ್ತಿರ ಟಾಟಾ ಗುಡ್ಸ್ ವಾಹನ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ…
ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ
ರಾಮದುರ್ಗ ಪಟ್ಟಣದ ಈಟಿ ಓನೇ ಇಂದ ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರ ಶುಕ್ರವಾರ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಪಲ್ಲಕ್ಕಿ ಉತ್ಸವ ಮೆರವಣಿಗೆ ಡೊಳ್ಳು ಕುಣಿತ ಸೇರಿದವು ಕುರುಬ ಸಮುದಾಯದ ಆರಾಧ್ಯ ದೇವರಾದ ಈ ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರಿಗೆ ಲಿಂಗಾಯತ, ವಾಲ್ಮೀಕಿ ಸೇರಿದಂತೆ ಎಲ್ಲ ವರ್ಗದ ಜನರು ನಡೆದುಕೊಳ್ಳುತ್ತಾರೆ. ಜಾತ್ರಾ ಮಹೋತ್ಸವ ಪ್ರಯುಕ್ತ ಸಂಪ್ರದಾಯದಂತೆ ಭಜನಾ ಸೇರಿದಂತೆ ವಿವಿಧ ರೀತಿಯ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರೆವೇರಿದವು
ಇಡಗಲ್ಲ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆ
ರಾಮದುರ್ಗ ತಾಲೂಕಿನ ಇಡಗಲ್ಲ ಗ್ರಾಮದಲ್ಲಿ ವಿಧಾನಸಭಾ ಕ್ಷೇತ್ರದ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಕೈಗೊಂಡು, ಮತ ಯಾಚಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ, ಮಂಜುಳಾ ದೇವರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪಾರ್ವತೆವ್ವ ಮೇಟಿ, ಸುರೇಶ್ ಪೂಜೇರ್ ಬಿ.ಎಸ್.ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
ಹುಲಕುಂದ ಹಾಗೂ ಬಟಕುರ್ಕಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ರಾಮದುರ್ಗ ಬಿಜೆಪಿಯವರು ಎಷ್ಟೇ ಅಬ್ಬರಿಸಿದರೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ ಅವರಿಗೆ ಮುನ್ನಡೆ ಸಿಗುವುದು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಪರ ಕ್ಷೇತ್ರದಾದ್ಯಂತ ಉತ್ತಮವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿದರು.ರಾಮದುರ್ಗ ವಿಧಾನಸಭಾ ಕ್ಷೇತ್ರದ ಸಾಲಹಳ್ಳಿಯಲ್ಲಿ ನಡೆದ ಹುಲಕುಂದ ಹಾಗೂ ಬಟಕುರ್ಕಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಸಮಾವೇಶದಲ್ಲಿ ಮಾತನಾಡಿದ ಶಾಸಕರು, ರಾಮದುರ್ಗದಿಂದ 20 ರಿಂದ 25 ಸಾವಿರ ಮತಗಳುಮುನ್ನಡೆ ಸಿಗುವುದು ಗ್ಯಾರಂಟಿ. ಕ್ಷೇತ್ರದಲ್ಲಿ ಒಗ್ಗಟಾಗಿ ಕೆಲಸಮಾಡಿ, ಮುನ್ನಡೆ…
ಮಳೆ ಆದರೆ ಸಾಕು ಚರಂಡಿ ನೀರು ತಹಶೀಲ್ದಾರ್ ಕಚೇರಿ ಆವರಣದಲ್ಲಿ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಮಳೆ ಆದರೆ ಸಾಕು ಚರಂಡಿ ನೀರು ನಿಲ್ಲುತ್ತದೆರಸ್ತೆ ಮೇಲೆ ಕೊಳಚೆ ನೀರು ಹರಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.ಚರಂಡಿಯಲ್ಲಿ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು ಮಳೆ ಆದರೆ ಸಾಕು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ
ಮತದಾನ ಜಾಗೃತಿ ಕುರಿತು ವಿಶೇಷ ಚೇತನರ ಬೈಕ್ ರ‍್ಯಾಲಿಗೆ ತಹಶೀಲ್ದಾರ ಸುರೇಶ ಚವಲಾರ ಚಾಲನೆ ನೀಡಿದರು.
ರಾಮದುರ್ಗ ತಾಲೂಕಾ ಸ್ವೀಪ್ ಸಮಿತಿಯಿಂದ ತಾಲೂಕ ಪಂಚಾಯತ ಆವರಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಕುರಿತು ವಿಶೇಷ ಚೇತನರ ಬೈಕ್ ರ‍್ಯಾಲಿಗೆ ತಹಶೀಲ್ದಾರ ಸುರೇಶ ಚವಲಾರ ಚಾಲನೆ ನೀಡಿ ಅವರು ಮಾತನಾಡಿದರು.ಹೆಚ್ಚು ಮತದಾನ ಮಾಡುವದರಿಂದ ಉತ್ತಮ ಆಡಳಿತ ನಿರೀಕ್ಷಿಸಬಹುದು. ಆದ್ದರಿಂದ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಿ ದೇಶದ ಸುಭದ್ರತೆಗೆ ಮುಂದಾಗುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನೂರಾರು ವಿಶೇಷ ಚೇತನರು ತಮ್ಮ ಬೈಕ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಕೂಗುತ್ತಾ ಮತದಾನದ ಜಾಗೃತಿಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ತಾಲೂಕ…
ಓಬಳಾಪೂರ ಗ್ರಾಮದ ಶ್ರೀ ರೇವಯ್ಯ ಶಿವಯೋಗಿಗಳವರ ಜಾತ್ರಾ ಮಹೋತ್ಸವದಂದು ಶ್ರೀಗಳು ಶ್ರೀ ರೇವಯ್ಯನವರ ಕೃತಿ ಲೋಕಾರ್ಪಣೆಗೊಳಿಸಿದರು.
ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದಲ್ಲಿ ಸದ್ಗುರು ಶ್ರೀ ರೇವಯ್ಯ ಶಿವಯೋಗಿಗಳವರ ಜಾತ್ರಾ ಮಹೋತ್ಸವದಂದು ಓಬಳಾಪೂರ ಗ್ರಾಮದ ಸಾಹಿತಿಗಳಾದ ಶ್ರೀನಿವಾಸಗೌಡ ಪಾಟೀಲ ರವರು ರಚಿಸಿದ ಕಾಯಕಯೋಗಿ ಸದ್ಗುರು ಶ್ರೀ ರೇವಯ್ಯ ಮಹಾಸ್ವಾಮಿಗಳು ದ್ವಿತೀಯ ಮುದ್ರಣ ಕೃತಿಯನ್ನು ಕನ್ನಡ ಧ್ವಜದೊಂದಿಗೆ ಶ್ರೀ ಬಸವಾನಂದ ಭಾರತಿ ಸ್ವಾಮಿಗಳು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ಗುಟಕಾ ಸಿಗರೇಟನಂತಹ ಧೂಮಪಾನ ಮಾಡಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ದೂಮಪಾನ ವ್ಯಸನವನ್ನು ಬಿಟ್ಟು ಅಧ್ಯಾತ್ಮದ ಕಡೆ ಒಲವು ತೋರಿ ಶ್ರೀ…
ಮತದಾನ ಜಾಗೃತಿ ಜಾಥಾಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ ನೀಲನಾಯಕ ಚಾಲನೆ ನೀಡಿದರು.
ಮತದಾನ ಜಾಗೃತಿ ಜಾಥಾಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ ನೀಲನಾಯಕ ಚಾಲನೆ ನೀಡಿದರು.ಬಾಗಲಕೋಟ ಜಿಲ್ಲೆಯ ನಾಯನೆಗಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅನಿಲ ನೀಲನಾಯಕ ಇವರು ನರೇಗಾ ಕೂಲಿಕಾರ್ಮಿಕರಿಗೆ ಮತದಾನ ಕುರಿತು ಜಾಗೃತಿ ನೀಡಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ದೇಶದ ಭವಿಷ್ಯ ಹಾಗೂ ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಪ್ರಜ್ಞಾವಂತ ಪ್ರಜೆಗಳಿಂದ ಮಾತ್ರ ಪ್ರಜಾ ಪ್ರಭುತ್ವದ ಯಶಸ್ವಿ ಸಾಧ್ಯವಿದೆ. ಎಲ್ಲರೂ ತಪ್ಪದೇ ತಮ್ಮ…
ಅನ್ಯಾಯ ಪ್ರಶ್ನಿಸಿದ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ..!
ಬೆಂಗಳೂರು: ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,ಅದನ್ನು ಪ್ರಶ್ನಿಸಲೇಬೇಡಿ..? ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ ಎಷ್ಟೇ ಕಾನೂನು ತಿಳ್ಕೊಂಡಿರ್ರಿ. ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು ಪ್ರಶ್ನಿಸುವ ಗೋಜಿಗೆ ಹೋಗಲೇಬೇಡಿ. ಹೋದರೆ ಏನಾಗುತ್ತೆ ಗೊತ್ತಾ..? ಇದಕ್ಕೆ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ.ಸುನೀಲ್ ಹೆಬ್ಬಿ ಅವರಿಗಾದ ಸ್ಥಿತಿಯೇ ಜೀವಂತ ಸಾಕ್ಷಿಯಂತಿದೆ ಅಷ್ಟಕ್ಕೂ ಸುನೀಲ್ ಹೆಬ್ಬಿ ಮಾಡಿದ ತಪ್ಪೇನು ಗೊತ್ತಾ..? ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲವರು ನಡೆಸುತ್ತಿದ್ದರೆನ್ನಲಾದ ಅಕ್ರಮ ಪ್ರಶ್ನಿಸಿದ್ದು ಅಷ್ಟೇ ಆ ಅಕ್ರಮಕ್ಕೆ ಬಲಿಪಶುಗಳಾಗುತ್ತಿದ್ದ ನಾಗರಿಕರನ್ನು…
