ಲಿಂಗಾಯತ ಸಂಘಟನೆ ವತಿಯಿಂದ ಮಹಾಪೌರ ಮತ್ತು ಉಪ ಮಹಾಪೌರರಿಗೆ ಸನ್ಮಾನ –
ಕಾಯಕವೇ ಕೈಲಾಸ ತತ್ವದಂತೆ ಬೆಳಗಾವಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ – ಮಹಾಪೌರ ಪ್ರೀತಿ ಕಾಮಕರ ಸರ್ವರ ಆಶಯದಂತೆ ಜಾತಿ, ಭಾಷೆ, ಧರ್ಮ, ಭೇದಭಾವ ತೊರೆದು ಬಸವಣ್ಣವರ ಕಾಯಕ ತತ್ವದಡಿಯಲ್ಲಿ ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗುವದರ ಜೊತೆಗೆ ಮೊದಲ ಪ್ರಯತ್ನದಲ್ಲಿ ಅತ್ಯಂತ ಜವಾಬ್ದಾರಿಯುತ ಮಹಾಪೌರ ಹುದ್ದೆ ನೀಡಿದ್ದು ಜವಾಬ್ದಾರಿಗೆ ತಕ್ಕಂತೆ ಸರ್ವರ ಸಹಾಯ,ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ನೂತನವಾಗಿ ಮಹಾಪೌರರಾಗಿ ಆಯ್ಕೆಯಾದ ಪ್ರೀತಿ ಕಾಮಕರ ರವಿವಾರ ದಿ.22 ರಂದು ಬೆಳಗಾವಿಯ…
ಸರ್ಕಾರಿ ಜಾಗ ಕಬಳಿಕೆ ವಿರುದ್ಧ ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಕಾನೂನು ಹೋರಾಟ
ಬೆಂಗಳೂರು ಕೊತ್ತನೂರು ಗ್ರಾಮದ ಆರ್ಬಿಐ ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ)ಸೇರಿದ ಜಾಗವನ್ನು ಕೆಲವು ಕಿಡಿಗೇಡಿಗಳು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಕಬಳಿಕೆ ಮಾಡುತ್ತಿರುವುದನ್ನು ಸರಕಾರ ತಕ್ಷಣ ತಡೆಯಬೇಕೆಂದು ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಆಗ್ರಹಿಸಿದೆ.ಪಾರ್ಕ್ ಗೆ ಸೇರಿದ ಜಾಗವನ್ನು ಕೆಲವು ವ್ಯಕ್ತಿಗಳು ಆಕ್ರಮವಾಗಿ ಕಬಳಿಕೆ ಮಾಡಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇದಕ್ಕೆ ಅನಧಿಕೃತವಾಗಿ ಜಿಬಿಎಯಿಂದ ಖಾತೆಯನ್ನು ಸಹ ಸೃಷ್ಟಿಸಿದ್ದಾರೆ. ಇದು ಸಾರ್ವಜನಿಕ ಆಸ್ತಿ ಎಂಬುದು ಸಾರ್ವಜನಿಕರಿಗೆ ಚೆನ್ನಾಗಿ ತಿಳಿದಿದ್ದು, ಕೆಲವು ಪ್ರಭಾವಿ ರಾಜಕೀಯ…
ರಾಮದುರ್ಗ ಸರಸ್ವತಿ ನಗರದಲ್ಲಿ ಚರಂಡಿ ನೀರು ರಸ್ತೆಯ ಮೇಲೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂ ಎಲ್ ಬಿಸಿ ಹೋಗುವ ಸರಸ್ವತಿ ನಗರದಲ್ಲಿಚರಂಡಿ ಬ್ಲಾಕ್ ಆಗಿ ರಸ್ತೆಯ ಮೇಲೆ ನೀರು ಹರಿಯುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುವ ಗಂಭೀರ ಸಮಸ್ಯೆಯಾಗಿದೆ. ಇದು ಕೇವಲ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ದುರ್ವಾಸನೆ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಬಹುದು. ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಹರಡಬಹುದು. ಚರಂಡಿ ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಬ್ಲಾಕ್ ಆದ ಚರಂಡಿಯಿಂದ ಬರುವ…
ಬಜರಂಗದಳದಿಂದ ಕೇರಳ ಸ್ಟೋರಿ -2 ಚಲನಚಿತ್ರ ಉಚಿತ ಪ್ರದರ್ಶನ
ಲವ್ ಜಿಹಾದ್ ಮತಾಂತರ ದಂತಹ ನೈಜ ಘಟನೆಗಳ ಆಧಾರಿತ ಕೇರಳ ಸ್ಟೋರಿ 2 ಚಲನಚಿತ್ರ ವನ್ನು ಸೋಮವಾರ 16/03/2026 ರಂದು ರಾಮದುರ್ಗ ನಗರದ ಶ್ರೀನಿವಾಸ ಚಿತ್ರಮಂದಿರ ದಲ್ಲಿ ವಿಶ್ವಹಿಂದೂ ಪರಿಷತ್ – ಭಜರಂಗದಳ ವತಿಯಿಂದ ನಾಲ್ಕು ಆಟಗಳನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಹಿಂದೂ ಕಾರ್ಯಕರ್ತರೆಲ್ಲ ಸೇರಿ ಚಿತ್ರಮಂದಿರ ವನ್ನು ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ ಗಳನ್ನು ಕಟ್ಟುವ ಮೂಲಕ ಉತ್ಸವದ ಕಳೆಯ ವಾತಾವರಣ ಸೃಷ್ಟಿಸಿದ್ದರು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಹಿಂದೂ ಕಾರ್ಯಕರ್ತರು ವಾಹನ ಮಾಡಿಕೊಂಡು ತಮ್ಮ ಊರಿನ…
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಕಾನೂನು ಅರಿವು ಕಾರ್ಯಕ್ರಮ.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸವದತ್ತಿಯ ಹಿರಿಯ ಶ್ರೇಣಿ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀ ಸಿದ್ದರಾಮ ನೇರವೇರಿಸಿದರು. ಅತಿಥಿಗಳಾಗಿ ಒಂದನೇ ಹೆಚ್ಚುವರಿ ಜೆ ಎಂ ಎಪ್ ಸಿ ನ್ಯಾಯಾಧೀಶರಾದ ಶ್ರೀ ಕೃಷ್ಣಪ್ಪ ಪಮ್ಮಾರ, ಸವದತ್ತಿ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ವಕೀಲರು,…
ದಾವಣಗೆರೆ,ಲೋಕ ಅದಾಲತ್ತಿನಲ್ಲಿ 6,818 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥ.
ಸರ್ವೋಚ್ಚ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ದಿನಾಂಕ : 14-03-2026 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆದಿದ್ದು, ಅದಾಲತ್ ನಲ್ಲಿ ಜಿಲ್ಲೆಯಲ್ಲಿ ವಿಚಾರಣೆಯಲ್ಲಿದ್ದ ಕೌಟುಂಬಿಕ, ಆಸ್ತಿ ವ್ಯಾಜ್ಯ, ಹಣಕಾಸು, ಅಪಘಾತ ಪರಿಹಾರ ಸೇರಿದಂತೆಒಟ್ಟು 6,818 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ” ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಿಕೆ ವೇಲಾ ಮಾಹಿತಿ ನೀಡಿದರು. ಪ್ರಥಮ…
ರಾಮದುರ್ಗ, ರಾಷ್ಟ್ರೀಯ ಲೋಕ ಅದಾಲತದಲ್ಲಿ ಒಟ್ಟು 870 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಮಾನ್ಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆದೇಶದ ಮೇರೆಗೆ ರಾಮದುರ್ಗ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಹಕಾರದೊಂದಿಗೆ ರಾಮದುರ್ಗ ನ್ಯಾಯಾಲಯಗಳಲ್ಲಿ ಶನಿವಾರ ದಿನಾಂಕ 14- 3-2026 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿ ಕೊಂಡಿದ್ದು ಒಟ್ಟು 5115 ಬಾಕಿ ಪ್ರಕರಣಗಳಲ್ಲಿ ಈ ದಿನ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1169 ಪ್ರಕರಣಗಳ ಪೈಕಿ 870 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಸವದತ್ತಿ , ರಾಷ್ಟ್ರೀಯ ಲೋಕ ಅದಾಲತದಲ್ಲಿ ಒಟ್ಟು 687 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ದಿನಾಂಕಃ 14-03-2026 ರಂದು ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹವ್ಮಿುಕೊಳ್ಳಲಾಗಿತ್ತು. ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಸವದತ್ತಿಯ ಎಲ್ಲಾ ನ್ಯಾಯಾಲಯಗಳಲ್ಲಿನ 8615 ಬಾಕಿ ಇರುವ ಪ್ರಕರಣಗಳ ಪೈಕಿ ಒಟ್ಟು 2088 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 687 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ, ಪಕ್ಷಗಾರರ ನ್ಯಾಯಾಲಯದ ದೀರ್ಘಾವಧಿಯ ಪ್ರಕ್ರಿಯೆ ಮತ್ತು…
ಯಲ್ಲಮ್ಮ ದೇವಸ್ಥಾನದ ಹುಂಡಿ ಏಣಿಕೆ: 3.07 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಮಾರ್ಚ್ 2026ರಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ₹3.07 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ ₹2.78 ಕೋಟಿ ನಗದು, 16.16 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, 12.35 ಲಕ್ಷ ಮೌಲ್ಯದ 4.547 ಕೆ.ಜಿ ಬೆಳ್ಳಿ ಆಭರಣ ಸಂಗ್ರಹ ಕಳೆದ ವಾರವೂ ಹುಂಡಿ ಎಣಿಕೆ ನಡೆದಿತ್ತು ಈ ಬಾರಿ ಮಾರ್ಚ್ 9ರಿಂದ 12ರ ಅವಧಿಯಲ್ಲಿ ನಡೆದ ಎಣಿಕೆಯಲ್ಲಿ ದಾಖಲೆ ಕಾಣಿಕೆ ಸಂಗ್ರಹ ಎಣಿಕೆ ಪ್ರಕ್ರಿಯೆಯಲ್ಲಿ…
ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪರ ನಿಂತ ಮುಖಂಡರು ಬೆಂಗಳೂರು, ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಕಟ್ಟಡಗಳಿಗೆ ವಾಸಯೋಗ್ಯ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು. ಸಂಘದ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ. ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ನ ವಿರೋಧ ಪಕ್ಷದಮುಖ್ಯ ಸಚೇತಕರಾದ ಎನ್.ರವಿಕುಮಾರ್, ಮಾಜಿ…
