BREAKING NEWS

ಪತ್ರಿಕೆ ವಿತರಿಸಲು ಹೋದ ಪತ್ರಕರ್ತರಿಗೆ ಅಯೋಗ್ಯ PDOನಿಂದ ಧಮಕಿ ಆರೋಪ..!

ಪತ್ರಿಕೆ ವಿತರಣೆಗೂ PDO ಪರ್ಮಿಷನ್ ಬೇಕಂತೆ..! ಸರ್ಕಾರಿ ಗುರುತಿನ ಚೀಟಿ ಧರಿಸದೆ “ನಾನೇ PDO” ಎಂದು ಅಧಿಕಾರದ ದರ್ಪ ಪ್ರದರ್ಶನ? ಸೊಂಡೆಕೊಪ್ಪ: ಪತ್ರಿಕೆ ವಿತರಣೆ ಮಾಡಲು ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದ ಪತ್ರಕರ್ತರೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶಿವಪ್ರಕಾಶ ಅವರು ಅನುಚಿತವಾಗಿ ವರ್ತಿಸಿ ಧಮಕಿ ಹಾಕಿದ್ದಾರೆ. ಪತ್ರಕರ್ತರು ಪತ್ರಿಕೆ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ “ಪತ್ರಿಕೆ ವಿತರಿಸಲು ನನ್ನ ಪರ್ಮಿಷನ್ ಬೇಕು” ಎಂಬ ರೀತಿಯಲ್ಲಿ ಅಧಿಕಾರಿಯವರು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಪಿಡಿಒ ಶಿವಪ್ರಕಾಶ ಪತ್ರಕರ್ತರು ಪತ್ರಿಕೆ ವಿತರಣೆ…

Read More

ರಾಮದುರ್ಗ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ವಿಜಯ ಸೇನಾ ಸಮಿತಿ ವತಿಯಿಂದ ದಿನಾಂಕ. 26-09-2026 ರಂದು ರಾಮದುರ್ಗ ಬಂದಗೆ ಕರೆ

ನಮ್ಮ ರಾಮದುರ್ಗ ತಾಲೂಕಿಗೆ ಬರದ ಮಹಾ ಛಾಯೆ ಅಪ್ಪಳಿಸಿದ್ದು ಅದು ಸರ್ಕಾರಕ್ಕೆ ಕಾಣುತ್ತಿಲ್ಲ ಬರ ಅಧ್ಯಯನ ತಂಡ ಜಿಲ್ಲಾ ಉಸ್ತುವಾರಿ ಸಚಿವರಿಗೂ ಬರ ಕಂಡಿಲ್ಲ ಕೈಕಟ್ಟಿ ಕುಳಿತ ಎಲ್ಲ ಜನಪ್ರತಿನಿಧಿಗಳ ಕಣ್ಣು ತೆರೆಸಲಿಕ್ಕೆ ಈ ಹೋರಾಟ , ಬೃಹತ್ ಪ್ರತಿಭಟನೆ 26 ರಂದು ರಾಮದುರ್ಗ ಬಂದ್‌ಗೆ ಕರೆ ನೀಡಲಾಗಿದ್ದು ಎಲ್ಲ ಸಾರ್ವಜನಿಕರು, ಅನ್ನದಾತರು, ರೈತ ಸಂಘಟನೆಗಳು, ಎಲ್ಲ ಸಂಘ ಸಂಸ್ಥೆಗಳು, ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈ ಹೋರಾಟದಲ್ಲಿ ಭಾಗವಹಿಸಿ ನಮ್ಮ ರೈತರಿಗಾಗಿ ನಿಮ್ಮ ಹೋರಾಟ…

Read More

ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಮರುಪರಿಶೀಲನೆ

ಧಾರವಾಡ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಿಸುವ ಮೂಲಕ ಮರುಪರಿಶೀಲನೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. ಗೃಹಲಕ್ಷ್ಮಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ, ಅವರ ಪ್ರಸ್ತುತ ಸ್ಥಿತಿಯನ್ನು ದೃಢಿಕರಿಸುವ ಉದ್ದೇಶದಿಂದ ಫಲಾನುಭವಿಗಳ ಮರುಪರಿಶೀಲನಾ ಕಾರ್ಯವನ್ನು ನಿಯೋಜಿತ ಗಣತಿದಾರರು (Enumerators)…

Read More

ಹಿರೇಮಾಗಿಯ ಶ್ರೀ ಮುತ್ತು ವಡ್ಡರ ಅವರ “ಮೌಲ್ಯದ ಮುತ್ತು” ನ್ಯಾನೋ ಕಥಾ ಕೃತಿ ಬಿಡುಗಡೆ

ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಅವರು ರಚಿಸಿರುವ “ಮೌಲ್ಯದ ಮುತ್ತು” ಎಂಬ ನ್ಯಾನೋ ಕಥಾ ಸಂಕಲನವು ಇದೇ ದಿನಾಂಕ 13-9-2026 ರಂದು ರವಿವಾರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ಲನಲ್ಲಿ ಪರಮಪೂಜ್ಯ ಶ್ರೀ ಡಾ.ಗುರು ಮಹಾಂತ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿದರು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ 100ಕ್ಕೂ ಹೆಚ್ಚು ನ್ಯಾನೋ ಕಥೆಗಳನ್ನು ಈ ಕೃತಿ ಒಳಗೊಂಡಿದೆ. ಇಂದಿನ ಮೊಬೈಲ್ ಯುಗದಲ್ಲಿ…

Read More

ಬೆಳಗಾವಿ : ಅಕ್ಟೋಬರ್ 23 ರಿಂದ ಕಿತ್ತೂರ ಉತ್ಸವ -2026

ಬೆಳಗಾವಿ ಅಕ್ಟೋಬರ್ 23, 24 ಹಾಗೂ 25 ರಂದು ಜರುಗಲಿರುವ 2026ರ ಕಿತ್ತೂರ ಉತ್ಸವವನ್ನುವಿಜೃಂಭಣೆಯ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಸೆ.16) ಜರುಗಿದ ಕಿತ್ತೂರ ಉತ್ಸವ-2026 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ಸವದ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳನ್ನು ಆಹ್ಚಾನಿಸಲು ಹಾಗೂ ದಸರಾ ಮಾದರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು…

Read More

ಬೆಳಗಾವಿ ಶಾರ್ಟ್ ಸರ್ಕ್ಯೂಟ್ ನಿಂದ ಒಂದೇ ಕುಟುಂಬದ ನಾಲ್ವರು ಸಜೀವ ದಹನ,

ಬೆಳಗಾವಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾವ್ಹಾಟ್ ಗಲ್ಲಿಯಲ್ಲಿ ನಡೆದಿದೆ. ತಡರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದವರು ಹೊರಬರಲಾರದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರಾಣಬಿಟ್ಟಿದ್ದಾರೆ. ಗಜಾನನ ರಾಜಾರಾಮ ದಮೋನೆ(65), ಶಾರದಾ…

Read More

ಮಾಹಿತಿ ಹಕ್ಕು ಕಾಯ್ದೆ ನಿರ್ಲಕ್ಷಿಸಿದರೆ ಕಠಿಣ ಕ್ರಮ.

ಬೆಂಗಳೂರು:ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸುವ ಹಾಗೂ ಆಯೋಗದ ವಿಚಾರಣೆಗಳಿಗೆ ಗೈರುಹಾಜರಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ ಸತಾಯಿಸುವ ಹಾಗೂ ಆಯೋಗದ ನೋಟಿಸ್‌ಗಳಿಗೆ ಬೆಲೆ ನೀಡದ ಪ್ರವೃತ್ತಿಯನ್ನು ನಿಯಂತ್ರಿಸಲು ಸರ್ಕಾರ ಹೊಸ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ. ಮಾಹಿತಿ ಆಯೋಗದಲ್ಲಿ ಬಾಕಿ ಉಳಿದಿದ್ದ ಪ್ರಕರಣವೊಂದರ ವಿಚಾರಣೆ ವೇಳೆ, ಅಧಿಕಾರಿಗಳು ನಿಯಮಾವಳಿಗಳ ಪ್ರಕಾರ ನಿಗದಿತ ಕಾಲಮಿತಿಯಲ್ಲಿ ಮಾಹಿತಿ ಒದಗಿಸದಿರುವುದು ಮತ್ತು ಆಯೋಗದ ವಿಚಾರಣೆಗೆ ಹಾಜರಾಗದೆ ಬೇಜವಾಬ್ದಾರಿತನ…

Read More

ಸವದತ್ತಿ ಜಿ. ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ – ಪಾಲಕರ ಸಭೆ

ಸವದತ್ತಿ : ಕಾಲೇಜು ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಜಾಗೃತಿ ವಹಿಸುವುದು ಪಾಲಕ ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್. ಬಿ. ಕಿವುಡಿ ಹೇಳಿದರು. ಸವದತ್ತಿಯ ಶ್ರೀ ಜಿ.ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರ ಮತ್ತು ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಾಧನೆ ಮಾಡಲು ಪಾಲಕರು ಉಪನ್ಯಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ತಿಳಿ ಹೇಳಿದರು. ವಿಜ್ಞಾನ ವಿಭಾಗದ ಉಪನ್ಯಾಸಕರಾದ ಡಾ…

Read More

ಮಹಿಳಾ ದೌರ್ಜನ್ಯ ತಡೆ; ಜಿಲ್ಲಾ ಮಟ್ಟದ ಕಾರ್ಯಾಗಾರ : ಮಹಿಳೆಯರ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ ನಾಗಲಕ್ಷ್ಮಿ ಚೌಧರಿ

ಬೆಳಗಾವಿ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಗೌರವ, ಘನತೆ ಹಾಗೂ ಸುರಕ್ಷತೆಯೊಂದಿಗೆ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆಯಬೇಕು. ಮಹಿಳೆಯರು ಯಾವುದೇ ಭಯ ಅಥವಾ ಮುಜುಗರವಿಲ್ಲದೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಹಾಗೂ ಅಗತ್ಯ ನೆರವು ಪಡೆಯುವಂತಹ ವಾತಾವರಣವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ತಿಳಿಸಿದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು…

Read More

ಬೆಳವಣಿಕಿಯಲ್ಲಿ ಆತಂಕ: ಸಿಎಲ್-2 ಬಾರ್‌ಗಳಲ್ಲೇ ಓಪನ್ ಮದ್ಯ ಸೇವನೆ, ಗಲ್ಲಿಗಲ್ಲಿಗಳಲ್ಲಿ ಮಟ್ಕಾ ಹಾವಳಿ!

ಡಬ್ಬಿ ಅಂಗಡಿ, ಎಗ್‌ರೈಸ್ ಸೆಂಟರ್‌, ಡಾಬಾಗಳಿಗೆ ಸಗಟು ಬಾಕ್ಸ್‌ಗಳ ಮದ್ಯ ಸಾಗಾಟದ ಗಂಭೀರ ಆರೋಪ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ತ್ವರಿತ ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ. ​ರೋಣ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ಐತಿಹಾಸಿಕ ಕೇಂದ್ರವಾದ ಬೆಳವಣಿಕಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ಚಟುವಟಿಕೆಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿವೆ. ಗ್ರಾಮದ ರೋಣ ರಸ್ತೆಯಲ್ಲಿರುವ ‘ಎಲ್.ವಿ ವೈನ್ಸ್’ ಮಳಿಗೆ ಸೇರಿದಂತೆ ಚಿಲ್ಲರೆ ಮದ್ಯ ಮಾರಾಟದ ಸನ್ನದು (CL-2) ಹೊಂದಿರುವ…

Read More