55 ಎಕರೆ ಭೂ ಹಗರಣಕ್ಕೆ ಹೈಕೋರ್ಟ್ ಬ್ರೇಕ್: ಅಸ್ತಿತ್ವದಲ್ಲೇ ಇಲ್ಲದ ‘ಲೇಕ್ ವ್ಯೂ ಟೂರಿಸಂ ಕಾರ್ಪೊರೇಷನ್’ಗೆ ಪರಭಾರೆ ರದ್ದು; ಸಿಬಿಐ ತನಿಖೆಗೆ ಆದೇಶ.
ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಅತ್ಯಂತ ಬೆಲೆಬಾಳುವ 55 ಎಕರೆ ಸರ್ಕಾರಿ ಜಮೀನನ್ನು “ಅಸ್ತಿತ್ವದಲ್ಲೇ ಇಲ್ಲದ” ಖಾಸಗಿ ಸಂಸ್ಥೆಯೊಂದಕ್ಕೆ ಪರಭಾರೆ ಮಾಡಿದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಒಂದು ‘ಹಗರಣ’ ಎಂದು ಬಣ್ಣಿಸಿ, ಆ ಪರಭಾರೆ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಇದರೊಂದಿಗೆ, ಈ ಸಂಪೂರ್ಣ ವ್ಯವಹಾರದ ಹಿಂದೆ ನಡೆದಿರಬಹುದಾದ ಪಿತೂರಿ ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಆದೇಶಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಅಮಾನಿ ಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿನ ಸುಮಾರು…
