ರಾಮದುರ್ಗದಲ್ಲಿ ವಿಶ್ವ ಭೂ ದಿನ ಆಚರಣೆ ಹಾಗೂ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ
ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ, ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 29.04.2026 ರಂದು ಮಧ್ಯಾಹ್ನ 4:00 ಗಂಟೆಗೆ, ತಾಲೂಕು ಪಂಚಾಯಿತಿ ಸಭಾಂಗಣ, ರಾಮದುರ್ಗದಲ್ಲಿ ವಿಶ್ವ ಭೂ ದಿನ ಆಚರಣೆ ಹಾಗೂ ಭೂಮಿ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಂಜುನಾಥ ಬಣಕಾರ, ಮಾನ್ಯ ದಿವಾಣಿ ನ್ಯಾಯಾಧೀಶರು, ಜೆಎಂಎಫ್‌ಸಿ ರಾಮದುರ್ಗ ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು…
ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ ಜರುಗಲಿದೆ. ದಿವ್ಯಸಾನಿಧ್ಯ : ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಮುಳ್ಳೂರ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟಕರು : ಜನಪ್ರಿಯ ಶಾಸಕರು ಸವದತ್ತಿ ವಿಶ್ವಾಸ…
ಗೋಮಾತೆ ಗೌರವ ಅಭಿಮಾನ ನಡೆಸುವ ಮೂಲಕ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ರಾಮದುರ್ಗ್ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿ ಅವರಿಗೆ ಗೋಮಾತೆಯ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮೆರವಣಿಗೆ ಮುಖಾಂತರ ಹಸು ಕರೆತಂದು ಜಾಗೃತಿ ಮೂಡಿಸಲಾಯಿತು ಗೋಗಳಿಗೆ ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಗುರುತಿನ ಗೌರವಣಿತ ಸ್ನಾನ ನೀಡಬೇಕು ಗೋಗುಳು ಸೇವೆಗಾಗಿ ಕಾನೂನು ರೂಪಿಸಬೇಕು ದೇಶಾದ್ಯಂತ ಗೋ ಹತ್ಯೆ ಸಂಪೂರ್ಣ ನಿಷೇಧಿಸಬೇಕು ಕೋಮುತ್ರಕ್ಕೆ ಸಂಬಂಧಿಸಿದಂತೆ ಸಂಸ್ಕರಣ ಘಟಕ ಉತ್ತೇಜಿಸುವ ಮೂಲಕ ಹೊಸ ಸಂಶೋಧನೆ ನಡೆಸಬೇಕು ಶಾಪಿಂಗ್ ಮಾಲ್ಗಳಲ್ಲಿ ಗೋ ಆಧಾರಿತ ಉತ್ಪನ್ನಗಳಿಗೆ ಕಡ್ಡಾಯ ಕೌಂಟರ್ ರಚಿಸಬೇಕು ಗೋಶಾಲ ಗಳಿಗೆ ಹೆಚ್ಚಿನ…
ಜಿಬಿಎ ಅಧಿಕಾರಿಗಳ ಆಡಳಿತಾವಧಿಯಲ್ಲಿ ಭಾರಿ ಅಕ್ರಮ : 1950 ಕೋಟಿ ರೂ. ದುರ್ಬಳಕೆ
ಬೆಂಗಳೂರು: ಬಿಬಿಎಂಪಿಯ (ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ) 2023-24ನೇ ಸಾಲಿನ ಸಾಲಿನ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, 1950.82 ಕೋಟಿ ರೂ. ದುರ್ಬಳಕೆಯಾಗಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಬೆಳಕಿಗೆ ಬಂದಿದೆ. ಪಾಲಿಕೆಯ 2022-23ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ 376 ಪುಟಗಳ ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯ ಆಡಳಿತ, ಕಾಮಗಾರಿ, ಕಂದಾಯ, ನಗರ ಯೋಜನೆ, ತೋಟಗಾರಿಕೆ, ಹಣಕಾಸು, ಅರಣ್ಯ, ಆರೋಗ್ಯ ಮತ್ತು ಶಿಕ್ಷಣ ವಿಭಾಗಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲು ಮಾಡಲಾಗಿದೆ. ಒಟ್ಟು 1950.82…
ಪರಿಶಿಷ್ಟ ಜಾತಿ/ವರ್ಗಗಳ ಜನರ ಸಮಸ್ಯೆಗಳ ಪರಿಹಾರಕ್ಕೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ: ಅಧಕ್ಷ ಡಾ.ಮೂರ್ತಿ.ಎಲ್
ಬೆಳಗಾವಿ, ಪರಿಶಿಷ್ಟ ಜಾತಿ, ಪರಿಶುಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಅನೇಕ ಸಮಸ್ಯೆಗಳಿದ್ದು ಅಂತಹ ಸಮಸ್ಯೆಗಳನ್ನು ಆಯೋಗವು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಕಟ್ಟು ನಿಟ್ಟಿನ ಕ್ರಮವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ಹೇಳಿದರು. ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ(ಏ.27) ಜರುಗಿದ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ…
ಬೆಳಗಾವಿ ಪೀಠ: ವಾರ್ಷಿಕ 7 ಸಾವಿರ ಅರ್ಜಿಗಳ ಇತ್ಯರ್ಥಕ್ಕೆ ಗುರಿ : ಆಯುಕ್ತ ನಾರಾಯಣ ಚನ್ನಾಳ
ಬೆಳಗಾವಿ, “ಮಾಹಿತಿ ಹಕ್ಕು ಕಾಯ್ದೆ ಜನಪರ ಮತ್ತು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ. ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತೀಕಾರಕ ಕಾಯ್ದೆಯಾಗಿದೆ. ಸಾಮಾನ್ಯ ಜನರಿಗೆ ಸರ್ಕಾರದ ಮಾಹಿತಿ ಸುಲಭವಾಗಿ ತಲುಪಬೇಕೆಂಬ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯು 2005 ರ ಅಕ್ಟೋಬರ್ 12 ರಂದು ಜಾರಿಗೆ ಬಂದಿರುತ್ತದೆ. ಕರ್ನಾಟಕ ರಾಜ್ಯವು ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳರವರು ತಿಳಿಸಿದ್ದಾರೆ. ಕರ್ನಾಟಕ…
ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ ಕಳೆದುಹೋದ ಮೊಬೈಲನ್ನು ಮಾಲೀಕರಿಗೆ ಹಿಂತಿರುಗಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ರಾಮದುರ್ಗ ಪೊಲೀಸ್ ಠಾಣೆ ಆವರಣಗಳಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ CEIR ಪೋರ್ಟಲ್ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ತಂತ್ರಜ್ಞಾನದ ನೆರವಿನಿಂದ ಈ ಮೊಬೈಲ್ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡಿ, ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.CEIR ಪೋರ್ಟಲ್ ಈಗ ಅಟೋ ಜನರೇಟಾಗಿ ನಮಗೆ ಈ ಮೊಬೈಲ್ ಒಳಗೆ ಇಂತಹ ನಂಬರ್ ಇದೆ ಎಂದು ತೋರಿಸುತ್ತದೆ . ಈ ಮೊಬೈಲ್ ಕಳ್ಳತನ ಮಾಡಿದವರು ಯಾರಿಗೋ…
ದೀಪಕ ಬಿಳ್ಳೂರ ಇವರಿಗೆ “ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ” ಹಾಗೂ “ಆದಿ ಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ”
ದಿನಾಂಕ ೨೬-೦೪-೨೦೨೬ ರಂದು ೪೧೨ ನೇ ಶಂಕರ ತತ್ವ ಮಾಸಿಕ ಚಿಂತನ ಸಂಭ್ರಮದಲ್ಲಿ “ಸಂಗೀತ ಭಾರತಿ” ಆದಿ ಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು- ಹೊಸಪೇಟೆ, ಇವರಿಂದ ಕೊಡ ಮಾಡುವ ರಾಷ್ಟ್ರೀಯ ಮಟ್ಟದ ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ-೨೦೨೬ ಹಾಗೂ ರಾಜ್ಯಮಟ್ಟದ ಆದಿ ಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ-೨೦೨೬ ಪ್ರಶಸ್ತಿಗಳನ್ನು ಹೊಸಪೇಟೆಯ ಕವಿ ಸಾಹಿತಿಯಾದ ದೀಪಕ ಬಿಳ್ಳೂರ ಅವರಿಗೆ ನೀಡಿ ಗೌರವಿಸಲಾಗಿದೆ, ದೀಪಕ ಬಿಳ್ಳೂರ ಅವರ ಸೃಜನಶೀಲ ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ಗುರುತಿಸಿ…
ಕನ್ನಡ ಭವನದಲ್ಲಿ ಜರುಗಿದ ಗಜಲ್ ಗೋಷ್ಠಿ ಕಾರ್ಯಕ್ರಮ
ಬೆಳಗಾವಿ : ಅರಬ್ಬೀ ಮತ್ತು ಪಾರ್ಷಿ ಭಾಷೆಯಿಂದ ಹುಟ್ಟಿದ ಗಜಲ್ ಸಾಹಿತ್ಯವು ಭಾರತಿಯರ ಹೃದಯವನ್ನು ಗೆದ್ದಿದೆ. ಉರ್ದು ಮತ್ತು ಹಿಂದಿ ಗಜಲ್ ಪ್ರಭಾವದಿಂದ ಕನ್ನಡದಲ್ಲಿಯೂ ಗಜಲ್ ಕಂಪು ಹರಡಿದ್ದು ಅನೇಕ ಹಿರಿ ಕಿರಿಯ ಕವಿಗಳು ಗಜಲ್ ಕಾವ್ಯವನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದ್ದಾರೆ ಎಂದು ಗಜಲ್ ಕವಿ ಈಶ್ವರ ಮಮದಾಪೂರ ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಸ್ಥಳೀಯ ಕನ್ನಡ ಭವನದಲ್ಲಿ ಜರುಗಿದ ಗಜಲ್ ಗೋಷ್ಠಿ ಕಾರ್ಯಕ್ರಮದಲ್ಲಿ ಭಗವಹಿಸಿ ಮಾತನಾಡುತ್ತಿದ್ದರು.ಪ್ರೀತಿ…
ಇನಾಂಗೋವನಕೊಪ್ಪ ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶರು ಶ್ರೀ ಸಿದ್ಧರಾಮ ಅವರು ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇನಾಂಗೋವನಕೊಪ್ಪ ಗ್ರಾಮದಲ್ಲಿ ಶ್ರೀ ದ್ಯಾಮ್ಮವ್ವ ದೇವಿ ಜಾತ್ರೆಯ ನಿಮಿತ್ಯ ಸವದತ್ತಿ ತಾಲೂಕಾ ಕಾನುನು ಸೇವೆಗಳ ಸಮೀತಿ ಸವದತ್ತಿ & ವಕೀಲರ ಸಂಘ ಸವದತ್ತಿ & ಶ್ರೀ ದ್ಯಾಮ್ಮವ್ವ ದೇವಿ ಜೀರ್ಣೋದ್ದಾರ ಟ್ರಸ್ಟ್ ಕಮೀಟಿ ಇನಾಂಗೋವನಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಟಿಎಲ್ಎಸ್ ಸಿ ಸವದತ್ತಿ ಶ್ರೀ ಸಿದ್ಧರಾಮ ಅವರು ಜ್ಯೋತಿ…
