ಲೋಕಾಪುರದಲ್ಲಿ ಒತ್ತುವರಿ ಅಂಗಡಿಗಳ ತೆರವು!
ಬಾಗಲಕೋಟೆ ಜಿಲ್ಲೆ ಲೋಕಾಪುರ ಪಟ್ಟಣದ ಪ್ರಮುಖ ಕೇಂದ್ರವಾದ ಬಸವೇಶ್ವರ ವೃತ್ತದ ಬಳಿ ಇಂದು ಮುಂಜಾನೆಯೇ ಜೆಸಿಬಿ ಘರ್ಜಿಸಿದೆ. ಮುಧೋಳ ತಹಶೀಲ್ದಾರ್ ಅವರ ಕಡಕ್ ಸೂಚನೆ ಮೇರೆಗೆ ಕಾರ್ಯಾಚರಣೆಗೆ ಇಳಿದ ಮುಧೋಳ ಇಒ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳ ತಂಡ, ರಸ್ತೆ ಬದಿಯಲ್ಲಿದ್ದ ಒತ್ತುವರಿ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿದೆ. ದೀರ್ಘಕಾಲದಿಂದ ಪಾದಚಾರಿಗಳ ಮತ್ತು ವಾಹನಗಳ ಮುಕ್ತ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿದ್ದ ಅಂಗಡಿಗಳನ್ನು ನೆಲಸಮಗೊಳಿಸುವ ಮೂಲಕ ರಸ್ತೆ ಸುಗಮಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ…
