ನ್ಯಾಯಾಲಯದ ಸಂಕೀರ್ಣ ಸವದತ್ತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಹವ್ಮಿುಕೊಳ್ಳಲಾಗಿತ್ತು
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಮ ರವರು ಬೆಳಗಾವಿಯ ಖಾಯಂ ಜನತಾ ನ್ಯಾಯಾಲಯದ ಕಾರ್ಯ ವಿಧಾನದ ಹಾಗೂ ವೈಶಿಷ್ಟ್ಯ ಬಗ್ಗೆ ಮಾತನಾಡಿ ಪ್ರಕರಣವೊಂದರ ಎರಡು ಪಕ್ಷಗಳವರು ರಾಜೀ ಸಂಧಾನ ಮಾಡಿಕೊಳ್ಳುವಲ್ಲಿ ಅಧ್ಯಕ್ಷರು ಹಾಗೂ ಇತರ ಇಬ್ಬರು ಸದಸ್ಯರು ಅವರುಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಪರಸ್ಪರ ರಾಜೀ ಮಾಡುಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ರಾಜೀ ಸಂಧಾನದ ಷರತ್ತುಗಳನ್ವಯವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಿ ತೀರ್ಪನ್ನು ನೀಡುತ್ತಾರೆ. ರಾಜೀ ಸಂಧಾನ ವಿಫಲವಾದಲ್ಲಿ ಹಾಗೂ ಆ ಪ್ರಕರಣ ಯಾವುದೇ ಅಪರಾಧಕ್ಕೆ ಸಂಬಂಧಿಸಿರದಿದ್ದಲ್ಲಿ ಅದರ ಎರಡೂ ಪಕ್ಷಗಳವರು ಸಾದರಪಡಿಸಿದ…
