ವಿಶ್ವ ಸಂಗೀತಚಿಕಿತ್ಸೆ ದಿನಾಚರಣೆ ನಿಮಿತ್ತ “ಸಂಗೀತಕಾರ್ಯಕ್ರಮ”
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಸಂಗೀತಚಿಕಿತ್ಸೆ ವಿಭಾಗಡಿಮ್ಹಾನ್ಸ್ ಹಾಗೂ ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಹಯೋಗದಲ್ಲಿ ವಿಶ್ವ ಸಂಗೀತಚಿಕಿತ್ಸೆ ದಿನಾಚರಣೆ ನಿಮಿತ್ತ “ಸಂಗೀತಕಾರ್ಯಕ್ರಮ” ವನ್ನು ದಿನಾಂಕ:21.05.2025ರಂದುಡಿಮ್ಹಾನ್ಸ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುಡಿಮ್ಹಾನ್ಸ್ ಸಂಸ್ಥೆಯನಿರ್ದೇಶಕರಾದಡಾ.ಅರುಣಕುಮಾರ ಸಿ ರವರು ಹಾಗೂ ವೇದಿಕೆಯ ಮೇಲೆ ಇರುವಎಲ್ಲಾ ಮುಖ್ಯ ಅತಿಥಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.“ಸಂಗೀತವು ಮನಸ್ಸಿಗೆ ಇರುವ ಒಳ್ಳೆಯ ಔಷಧಿ” ಯೆಂದರು.ಇತ್ತೀಚಿನ ದಿನಗಳಲ್ಲಿ ಅನೇಕ ವ್ಯಕ್ತಿಗಳಿಗೆ ಕಾಡುವಆತಂಕ, ಖಿನ್ನತೆ, ಏಕಾಂಗೀತನ ಇವುಗಳಿಗೆ ಸಂಗೀತದಲ್ಲಿಇರುವರಾಗ, ತಾಳ ಮತ್ತು ಭಾವ ಇವುಗಳು…
