ಪೊಲೀಸರ ಬಗ್ಗೆ ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಿದರೆ ಕ್ರಿಮಿನಲ್ ಅಪರಾಧವಾಗುವುದಿಲ್ಲ – ಹೈಕೋರ್ಟ್!
ಹಿಮಾಚಲ ಪ್ರದೇಶ : ಪೊಲೀಸರ ಕ್ರಮವನ್ನು ಪ್ರತಿಭಟಿಸಿದರೆ ಅಥವಾ ಅನಿಯಂತ್ರಿತ ಭಾಷೆ ಬಳಸಿದರೆ ಅದು ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಅಡ್ಡಿಪಡಿಸುವ ಕ್ರಿಮಿನಲ್ ಅಪರಾಧವಾಗುದಿಲ್ಲ ಎಂದು ಹೇಳಿರುವ ಹಿಮಾಚಲ ಪ್ರದೇಶ ಹೈಕೋರ್ಟ್, ಚಾಲಕನೋರ್ವನ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದೆ. ಸಂಚಾರ ಕರ್ತವ್ಯ ನಿರತ ಪೊಲೀಸರು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಹೇಳಿದಾಗ ಫೇಸ್ಬುಕ್ ನೇರಪ್ರಸಾರ ಕೈಗೊಂಡು ಕೆಲ ಟೀಕೆಗಳನ್ನು ಮಾಡಿದ್ದ ಚಾಲಕನೊಬ್ಬನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಶರ್ಮಾ ಅವರ ಪೀಠ ಈ ವಿಚಾರ ತಿಳಿಸಿದೆ….
