ಮಹಾಶರಣೆ ಅಕ್ಕ ಮಹಾದೇವಿ ರವರ ಜೀವನವೇ ಶುದ್ಧ ಭಕ್ತಿಗೆ ಉದಾಹರಣೆ :- ಡಾ. ಸಿದ್ಧಣ್ಣ ವಾಲಿಶೆಟ್ಟಿ
ಬೆಳಗಾವಿ, ಲಿಂಗಾಯತ ಸಂಘಟನೆ ವತಿಯಿಂದ ಇಂದು ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ವಚನ ಪಿತಾಮಹ ಡಾ. ಪ.ಗು. ಹಳಕಟ್ಟಿ ಭವನದಲ್ಲಿ “ವೈರಾಗ್ಯ ನಿಧಿ ಅಕ್ಕ ಮಹಾದೇವಿ ಜಯಂತಿ” ಆಚರಣೆ ಅಂಗವಾಗಿ ಅನುಭಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಡಾ. ಸಿದ್ಧಣ್ಣ ವಾಲಿಶೆಟ್ಟಿ ಸಹಾಯಕ ಪ್ರಾಧ್ಯಾಪಕರು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಅವರು ಮಾತನಾಡಿ, 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಹುಟ್ಟಿದ ಮಹಾನ್ ಸ್ತ್ರೀ ಸಂತೆಯಾದ ಅಕ್ಕ ಮಹಾದೇವಿ ಅವರು ಭಕ್ತಿ, ವೈರಾಗ್ಯ ಮತ್ತು ಆತ್ಮಜ್ಞಾನಕ್ಕೆ…
