ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 2% ರಂತೆ ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ದಸಂಸ ಪ್ರತಿಭಟನೆ
ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕರಾದ ತರಿಕೆರೆ ವೆಂಕಟೇಶ್ ರವರು ಮಾತನಾಡಿ ಪರಿಶಿಷ್ಟ ಅಲೆಮಾರಿ ಸಮುದಾಯಗಳಾದ ಸಿಳ್ಳೆಕ್ಯಾತ, ಕೋಲೆಬಸವ, ಹಂದಿಜೋಗಿ, ದೊಂಬರ, ಸುಡುಗಾಡು ಸಿದ್ಧ, ಚನ್ನದಾಸ, ಕೊರಮ, ಕೊರಚ ಮುಂತಾದ ನಿರ್ಗತಿಕ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುಂಪು ಮಾಡಿ ಶೇ. 2% ರಷ್ಟಾದರೂ ಮೀಸಲಾತಿಯನ್ನು ಕೊಡಬೇಕಾಗಿತ್ತು. ಏಕೆಂದರೆ ಈ ಅಲೆಮಾರಿ ಸಮುದಾಯಗಳು ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೆ ಮರದ ಕೆಳಗೆ, ಪಾಳುಮಂಪಟಗಳಲ್ಲಿ ನೆಲೆಗಳೇ ಇಲ್ಲದೆ ಬೀದಿಯಲ್ಲಿ ಬದುಕನ್ನು ದೂಡುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಈ ಅಲೆಮಾರಿ…
