ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿಕವಿ ಭಾವನೆಗೆ ಸ್ಪಂದಿಸಬೇಕು ಸುಮಾ ಕಿತ್ತೂರ
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಾ ಕಿತ್ತೂರ ಅವರು ಮಾತನಾಡುತ್ತ ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಕವನ ರಚನೆ ಎನ್ನುವುದು ಮರುಸೃಷ್ಟಿಯಂತೆಬದುಕಿಗೆ ಹೊಸ ಮಾರ್ಗಸೂಚಿ ಆಗಬಲ್ಲದು. ಹಿರಿಯರ ಬದುಕೆನ್ನುವುದೆ ಒಂದು ತೆರೆದ ಪುಸ್ತಕದ ಬರಹದಂತೆ ಅದನ್ನು ಗಂಭೀರವಾಗಿ ಓದಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೆ ಬದುಕು ಹಾಗು ಬರಹ ಸಾರ್ಥಕಗೊಳ್ಳುವುದು ಎಂದು…
