ಬೆಳವಣಿಕಿಯಲ್ಲಿ ಆತಂಕ: ಸಿಎಲ್-2 ಬಾರ್ಗಳಲ್ಲೇ ಓಪನ್ ಮದ್ಯ ಸೇವನೆ, ಗಲ್ಲಿಗಲ್ಲಿಗಳಲ್ಲಿ ಮಟ್ಕಾ ಹಾವಳಿ!
ಡಬ್ಬಿ ಅಂಗಡಿ, ಎಗ್ರೈಸ್ ಸೆಂಟರ್, ಡಾಬಾಗಳಿಗೆ ಸಗಟು ಬಾಕ್ಸ್ಗಳ ಮದ್ಯ ಸಾಗಾಟದ ಗಂಭೀರ ಆರೋಪ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ತ್ವರಿತ ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ. ರೋಣ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ಐತಿಹಾಸಿಕ ಕೇಂದ್ರವಾದ ಬೆಳವಣಿಕಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ಚಟುವಟಿಕೆಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿವೆ. ಗ್ರಾಮದ ರೋಣ ರಸ್ತೆಯಲ್ಲಿರುವ ‘ಎಲ್.ವಿ ವೈನ್ಸ್’ ಮಳಿಗೆ ಸೇರಿದಂತೆ ಚಿಲ್ಲರೆ ಮದ್ಯ ಮಾರಾಟದ ಸನ್ನದು (CL-2) ಹೊಂದಿರುವ…
