ರೋಣ ಅಕ್ರಮ ಪಡಿತರ ಅಕ್ಕಿ ಸಾಗಾಟ : 6 ಕ್ವಿಂಟಲ್ 10 ಕೆಜಿ ಅಕ್ಕಿ ವಶ
ಗದಗ ಜಿಲ್ಲೆ ರೋಣ-ನರಗುಂದ ರಸ್ತೆಯ ಬಸಲಾಪುರ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರ ನೇತೃತ್ವದ ತಂಡವು ದಾಳಿ ನಡೆಸಿ ಜಪ್ತಿ ಮಾಡಿದೆ. 18/06/2026 ರಂದು ರಾತ್ರಿ ಚಿಕ್ಕಮನ್ನೂರಿನಿಂದ ರೋಣದ ಕಡೆಗೆ ಅಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರು ದಾಳಿ ನಡೆಸಿದರು. ಪರಿಶೀಲನೆ ನಡೆಸಿದಾಗ ಆಟೋದಲ್ಲಿ ಪಡಿತರ ಅಕ್ಕಿ ತುಂಬಿದ 15 ಚೀಲಗಳು ಪತ್ತೆಯಾಗಿವೆ. ತಲಾ 41 ಕೆಜಿ…
