ವೀರರಾಣಿಯ ನೆಲದಲ್ಲಿ ಸಾಂಸ್ಕೃತಿಕ ವೈಭವ; ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ
ಬೆಳಗಾವಿ ಬ್ರಿಟೀಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ ಸ್ಮರಣಾರ್ಥ ಆಚರಿಸುವ ಕಿತ್ತೂರು ಉತ್ಸವವು ಶುಕ್ರವಾರ ಕಿತ್ತೂರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆರಂಭಗೊಂಡಿತು. ಚನ್ನಮ್ಮನ ಉತ್ಸವದ ಸಂಭ್ರಮ, ಐತಿಹಾಸಿಕ ಪರಂಪರೆಯನ್ನು ನೆನಪಿಸುವ ವಾತಾವರಣ ಕಿತ್ತೂರಿನಲ್ಲಿ ನಿರ್ಮಾಣವಾಯಿತು. ರಾಜ್ಯದಾದ್ಯಂತ ಸಂಚರಿಸಿದ ವೀರ ಜ್ಯೋತಿಯನ್ನು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೀರರಾಣಿ ಕಿತ್ತೂರು…
