ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯ ನಿಮಿತ್ಯ ಕರಡಿ ಮಜಲು ಪ್ರದರ್ಶನ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯ ನಿಮಿತ್ಯ ಕರಡಿ ಮಜಲನ್ನು ನಾಗಪ್ಪ ಯಲ್ಲಪ್ಪ ರಕ್ಷಿ ಗುರುಗಳು ಹಾಗೂ ಅವರ ತಂಡದವರು ಜಾತ್ರೆಯಲ್ಲಿ ಪ್ರದರ್ಶಿಸಿದರು. ಕರಡಿ ಮಜಲು ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಕಲೆಯಾಗಿದ್ದು, ಕರಡಿ ವಾದ್ಯ, ಡೊಳ್ಳು, ತಾಳ ಮತ್ತು ಸನಾದಿ ಬಳಸಿ ಪ್ರದರ್ಶಿಸಲಾಗುವ ಲವಲವಿಕೆಯ ವಾದ್ಯ ನೃತ್ಯವಾಗಿದೆ. ವಾದ್ಯಗಳು: ಕರಡಿ (ಕರಡಿ ಗುಡುಗಿನಂತಿರುವ ವಾದ್ಯ), ಡೊಳ್ಳು, ತಾಳ, ಮತ್ತು ಸನಾದಿ ಮುಖ್ಯವಾದ್ಯಗಳು, ಪ್ರದರ್ಶನ ಶೈಲಿ: ಕಲಾವಿದರು ಲಯಬದ್ಧವಾಗಿ ಕುಣಿಯುತ್ತಾ,…
ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯು ಅತ್ಯಂತ ಪುರಾತನ ಮತ್ತು ಪ್ರಸಿದ್ಧವಾಗಿದೆ. ಈ ಜಾತ್ರೆಯು ಸಾಮಾನ್ಯವಾಗಿ ಹಬ್ಬದ ವಾತಾವರಣದಲ್ಲಿ, ಪಲ್ಲಕ್ಕಿ ಉತ್ಸವ ಮತ್ತು ಕರಡಿ ಮಜಲಿನೊಂದಿಗೆ ರಥೋಸ್ತವ ವಿಜೃಂಭಣೆಯಿಂದ ಜರಗಿತು .
ಬೆಳಗಾವಿ ಜಿಲ್ಲೆಯಲ್ಲಿ ಸಿಲಿಂಡರ್, ಇಂಧನ ಕೊರತೆ ಇಲ್ಲ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿಕೊಂಡರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಯಾವುದೇ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇಲ್ಲ.ಬಂಕ್ ಗಳಲ್ಲಿ ಸ್ಟಾಕ್ ಖಾಲಿಯಾದರೆ ನಗರದಲ್ಲಿ ಕೇವಲ ಐದು ಗಂಟೆಗಳಲ್ಲಿ ಸ್ಟಾಕ್ ಲಭ್ಯವಾಗಲಿದೆ.ಇಂಧನ ಕೊರತೆ ವದಂತಿಗೆ ಕಿವಿಗೊಡಬಾರದು. ಇಂಧನ ಪೂರೈಕೆ ಕಂಪೆನಿ ಹಾಗೂ ಬಂಕ್ಮಾಲೀಕರ ಜತೆ ಈಗಾಗಲೇ ಚರ್ಚೆ…
ಜಕ್ಕಲಿ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಆಕ್ರೋಶ
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಹತ್ತಿರ ದಲಿತ ಸಮುದಾಯದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ರೋಣ ಪೋಲಿಸ್ ಠಾಣೆಯಲ್ಲಿ ಎಲ್ಲಾ ದಲಿತ ಮುಖಂಡರು ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಈ ಕುರಿತು…
ಲಿಂಗಾಯತ ಸಂಘಟನೆ ವತಿಯಿಂದ ಮಹಾಪೌರ ಮತ್ತು ಉಪ ಮಹಾಪೌರರಿಗೆ ಸನ್ಮಾನ –
ಕಾಯಕವೇ ಕೈಲಾಸ ತತ್ವದಂತೆ ಬೆಳಗಾವಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ – ಮಹಾಪೌರ ಪ್ರೀತಿ ಕಾಮಕರ ಸರ್ವರ ಆಶಯದಂತೆ ಜಾತಿ, ಭಾಷೆ, ಧರ್ಮ, ಭೇದಭಾವ ತೊರೆದು ಬಸವಣ್ಣವರ ಕಾಯಕ ತತ್ವದಡಿಯಲ್ಲಿ ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗುವದರ ಜೊತೆಗೆ ಮೊದಲ ಪ್ರಯತ್ನದಲ್ಲಿ ಅತ್ಯಂತ ಜವಾಬ್ದಾರಿಯುತ ಮಹಾಪೌರ ಹುದ್ದೆ ನೀಡಿದ್ದು ಜವಾಬ್ದಾರಿಗೆ ತಕ್ಕಂತೆ ಸರ್ವರ ಸಹಾಯ,ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ನೂತನವಾಗಿ ಮಹಾಪೌರರಾಗಿ ಆಯ್ಕೆಯಾದ ಪ್ರೀತಿ ಕಾಮಕರ ರವಿವಾರ ದಿ.22 ರಂದು ಬೆಳಗಾವಿಯ…
ಸರ್ಕಾರಿ ಜಾಗ ಕಬಳಿಕೆ ವಿರುದ್ಧ ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಕಾನೂನು ಹೋರಾಟ
ಬೆಂಗಳೂರು ಕೊತ್ತನೂರು ಗ್ರಾಮದ ಆರ್ಬಿಐ ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ)ಸೇರಿದ ಜಾಗವನ್ನು ಕೆಲವು ಕಿಡಿಗೇಡಿಗಳು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಕಬಳಿಕೆ ಮಾಡುತ್ತಿರುವುದನ್ನು ಸರಕಾರ ತಕ್ಷಣ ತಡೆಯಬೇಕೆಂದು ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಆಗ್ರಹಿಸಿದೆ.ಪಾರ್ಕ್ ಗೆ ಸೇರಿದ ಜಾಗವನ್ನು ಕೆಲವು ವ್ಯಕ್ತಿಗಳು ಆಕ್ರಮವಾಗಿ ಕಬಳಿಕೆ ಮಾಡಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇದಕ್ಕೆ ಅನಧಿಕೃತವಾಗಿ ಜಿಬಿಎಯಿಂದ ಖಾತೆಯನ್ನು ಸಹ ಸೃಷ್ಟಿಸಿದ್ದಾರೆ. ಇದು ಸಾರ್ವಜನಿಕ ಆಸ್ತಿ ಎಂಬುದು ಸಾರ್ವಜನಿಕರಿಗೆ ಚೆನ್ನಾಗಿ ತಿಳಿದಿದ್ದು, ಕೆಲವು ಪ್ರಭಾವಿ ರಾಜಕೀಯ…
ರಾಮದುರ್ಗ ಸರಸ್ವತಿ ನಗರದಲ್ಲಿ ಚರಂಡಿ ನೀರು ರಸ್ತೆಯ ಮೇಲೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂ ಎಲ್ ಬಿಸಿ ಹೋಗುವ ಸರಸ್ವತಿ ನಗರದಲ್ಲಿಚರಂಡಿ ಬ್ಲಾಕ್ ಆಗಿ ರಸ್ತೆಯ ಮೇಲೆ ನೀರು ಹರಿಯುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುವ ಗಂಭೀರ ಸಮಸ್ಯೆಯಾಗಿದೆ. ಇದು ಕೇವಲ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ದುರ್ವಾಸನೆ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಬಹುದು. ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಹರಡಬಹುದು. ಚರಂಡಿ ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಬ್ಲಾಕ್ ಆದ ಚರಂಡಿಯಿಂದ ಬರುವ…
ಬಜರಂಗದಳದಿಂದ ಕೇರಳ ಸ್ಟೋರಿ -2 ಚಲನಚಿತ್ರ ಉಚಿತ ಪ್ರದರ್ಶನ
ಲವ್ ಜಿಹಾದ್ ಮತಾಂತರ ದಂತಹ ನೈಜ ಘಟನೆಗಳ ಆಧಾರಿತ ಕೇರಳ ಸ್ಟೋರಿ 2 ಚಲನಚಿತ್ರ ವನ್ನು ಸೋಮವಾರ 16/03/2026 ರಂದು ರಾಮದುರ್ಗ ನಗರದ ಶ್ರೀನಿವಾಸ ಚಿತ್ರಮಂದಿರ ದಲ್ಲಿ ವಿಶ್ವಹಿಂದೂ ಪರಿಷತ್ – ಭಜರಂಗದಳ ವತಿಯಿಂದ ನಾಲ್ಕು ಆಟಗಳನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಹಿಂದೂ ಕಾರ್ಯಕರ್ತರೆಲ್ಲ ಸೇರಿ ಚಿತ್ರಮಂದಿರ ವನ್ನು ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ ಗಳನ್ನು ಕಟ್ಟುವ ಮೂಲಕ ಉತ್ಸವದ ಕಳೆಯ ವಾತಾವರಣ ಸೃಷ್ಟಿಸಿದ್ದರು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಹಿಂದೂ ಕಾರ್ಯಕರ್ತರು ವಾಹನ ಮಾಡಿಕೊಂಡು ತಮ್ಮ ಊರಿನ…
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಕಾನೂನು ಅರಿವು ಕಾರ್ಯಕ್ರಮ.
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯುವ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸವದತ್ತಿಯ ಹಿರಿಯ ಶ್ರೇಣಿ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀ ಸಿದ್ದರಾಮ ನೇರವೇರಿಸಿದರು. ಅತಿಥಿಗಳಾಗಿ ಒಂದನೇ ಹೆಚ್ಚುವರಿ ಜೆ ಎಂ ಎಪ್ ಸಿ ನ್ಯಾಯಾಧೀಶರಾದ ಶ್ರೀ ಕೃಷ್ಣಪ್ಪ ಪಮ್ಮಾರ, ಸವದತ್ತಿ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ವಕೀಲರು,…
ದಾವಣಗೆರೆ,ಲೋಕ ಅದಾಲತ್ತಿನಲ್ಲಿ 6,818 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥ.
ಸರ್ವೋಚ್ಚ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ದಿನಾಂಕ : 14-03-2026 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆದಿದ್ದು, ಅದಾಲತ್ ನಲ್ಲಿ ಜಿಲ್ಲೆಯಲ್ಲಿ ವಿಚಾರಣೆಯಲ್ಲಿದ್ದ ಕೌಟುಂಬಿಕ, ಆಸ್ತಿ ವ್ಯಾಜ್ಯ, ಹಣಕಾಸು, ಅಪಘಾತ ಪರಿಹಾರ ಸೇರಿದಂತೆಒಟ್ಟು 6,818 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ” ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಿಕೆ ವೇಲಾ ಮಾಹಿತಿ ನೀಡಿದರು. ಪ್ರಥಮ…
