BREAKING NEWS

ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆಯ ಅಂಗವಾಗಿ ದುಂಡು ಮೇಜಿನ ಸಭೆ

ರಾಮದುರ್ಗ ಭಾರತ ದೇಶ ಜಾತ್ಯಾತೀತ ದೇಶ. ಇಲ್ಲಿ ಎಲ್ಲ ಸಮಾಜದವರು ಕೂಡಿ ಬಾಳಿದಂತಹ ದೇಶ. ಈ ದೇಶದಲ್ಲಿ ಇವತ್ತು ಜಾತಿ ಆಧಾರದಲ್ಲಿ ನಮ್ಮನ್ನು ಒಡೆಯುವ ಜಾತಿವಾದಿಗಳು ಕುತಂತ್ರ ಮಾಡುತ್ತಿದ್ದಾರೆ. ಇದನ್ನು ತಡೆಯಲು ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾಗಬೇಕೆಂದು ಸಾನಿಧ್ಯ ವಹಿಸಿದ ಶ್ರೀ.ಮ.ನಿ.ಪ್ರ ಶಾಂತವೀರ ಸ್ವಾಮಿಗಳು ಶೀವಮೂರ್ತೇಶ್ವರ ಮಠ ರಾಮದುರ್ಗ ಇವರು ಕಾರ್ಮಿಕ ಕಚೇರಿಯಲ್ಲಿ ನಡೆದ ಇನ್ಸಾಫ್ ಕಮಿಟಿ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ನಡೆದಿರುವ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು….

Read More

ಬಲಿಷ್ಠ ದೇಶ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಹುಮುಖ್ಯ: ಸಚಿವ ಮಧು ಬಂಗಾರಪ್ಪ

ಬೆಳಗಾವಿಯಲ್ಲಿ ನಡೆಸಲಾಗುತ್ತಿರುವ ಪ್ರತಿಭಾನ್ವೇಷಣೆ ಪರೀಕ್ಷೆಯು ರಾಜ್ಯದಲ್ಲಿ ಮಾದರಿಯಾಗಿದ್ದು, ಇದೇ ರೀತಿ ರಾಜ್ಯಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ ಏರ್ಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ, ಚಿಕ್ಕೋಡಿ ಇವರ ಸಂಯುಕ್ತಾಶ್ರಯದಲ್ಲಿ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಬುಧವಾರ ನಡೆದ ಪ್ರತಿಭಾನ್ವೇಷಣೆ ಪರೀಕ್ಷೆ-2025ರ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿದರು. ತಂದೆ ತಾಯಿಗಳ ಆಶಯದಂತೆ ಮಕ್ಕಳು ದೇಶಕ್ಕೆ…

Read More

ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಪತ್ರ ಚಳುವಳಿ.! ಚಳುವಳಿಯನ್ನು ಬೆಂಬಲಿಸಿ ಪತ್ರ ಬರೆದ ನ್ಯಾಯವಾದಿಗಳು

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಲೋಕಾಪೂರ-ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಇದೇ ಡಿಸೆಂಬರ್ 10 ರಿಂದ ಪತ್ರ ಚಳುವಳಿಯನ್ನು ಪ್ರಾರಂಭಿಸಿದೆ ಡಿಸೆಂಬರ್ 10 ರಂದು ಪಟ್ಟಣದ ಹೊರ ವಲಯದಲ್ಲಿರುವ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಮುಖಂಡ ರೆಲ್ಲರೂ ಸೇರಿ ಲೋಕಾಪೂರದಿಂದ ಧಾರವಾಡ ನೂತನ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡುವ ಕುರಿತು ಕಾಲೇಜು ವಿದ್ಯಾರ್ಥಿಗಳಿಂದ ಕೇಂದ್ರ…

Read More

ಕಲ್ಲಾಪೂರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಕಾರ್ಯಕ್ರಮವನ್ನು ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ ಬ. ಅಳಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು.ಅತಿಥಿಗಳಾಗಿ ಎಸ್ ಡಿಎಂಸಿ ಉಪಾಧ್ಯಕ್ಷರು ಕಮಲಾ ಕ. ಮೇಟಿ , ಸದಸ್ಯರಾದ ಬಸವರಾಜ ಕ. ಕಡಕೋಳ, ಪ್ರಕಾಶ ಶಿ. ಮೊರಬದ, ಮಹಾಂತೇಶ ಬ. ಪಂಚೇನವರ, ಶಾಲೆಯ ಮುಖ್ಯೋಪಾಧ್ಯರು ಪಿ. ಎಂ. ದಿಕ್ಷೀತ, ಶಿಕ್ಷಕರಾದ…

Read More

ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ರಸ್ತಾ ರೋಖೊ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ನ್ಯಾಷನಲ್ ಹೂಮನ್ ರೈಟ್ಸ್ ಮತ್ತು ಶಬರಿ ಎಕ್ಷಪ್ರೆಸ್ ರೈಲು ಹೋರಾಟ ಸಮಿತಿ ರಾಮದುರ್ಗ, ಕರ್ನಾಟಕ ರಕ್ಷಣಾ ವೇದಿಕೆ  ಹಾಗೂ ವಿವಿಧ ಸಂಘಟನೆ ಗಳಿಂದ ಮಿನಿ ವಿಧಾನಸೌಧ ಎದುರುಗಡೆ ಅಂಬೇಡ್ಕರ್ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು. ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಬಿ ಯು ಬೈರಕದಾರ, ರಾಜೇಶ್ವರಿ ಮೆಟಗುಡ್ಡ ವಕೀಲರು  ಮಾತನಾಡಿ ನ್ಯಾಷನಲ್ ಹೂಮನ್ ರೈಟ್ಸ್ ಮತ್ತು ಶಬರಿ ಎಕ್ಷಪ್ರೆಸ್ ರೈಲು ಹೋರಾಟ ಸಮಿತಿ ರಾಮದುರ್ಗ…

Read More

ಲೋಕಾಪುರ to ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಸಂಸದ ಪ್ರಹ್ಲಾದ್ ಜೋಶಿ ಮನವಿ

ಧಾರವಾಡ ಜಿಲ್ಲೆಯ ಸಂಸದರಾದ ಪ್ರಹ್ಲಾದ್ ಜೋಶಿ ಅವರು ಸೋಮವಾರ ದಿಲ್ಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಅವರನ್ನು ಭೇಟಿಯಾಗಿ ಲೋಕಾಪೂರದಿಂದ ಧಾರವಾಡ ಮತ್ತು ಬಾಗಲಕೋಟೆ ಟು ಕುಡಚಿ ರೈಲ್ವೆ ಮಾರ್ಗಗಳ ಕುರಿತು ಸಮಗ್ರವಾಗಿ ಚರ್ಚಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ರಾಮದುರ್ಗ, ಸವದತ್ತಿ ಮಾರ್ಗವಾಗಿ ಲೋಕಾಪುರ- ಧಾರವಾಡ ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಾಣ ಮತ್ತು ಬಾಗಲಕೋಟೆ ಟು ಕುಡಚಿ ಕಾಮಗಾರಿಗೆ ವೇಗ ನೀಡಲು ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರ ರೈಲ್ವೆ…

Read More

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಪತ್ತೆ ವದಂತಿ – ಎಚ್ಚೆತ್ತ ಆರೋಗ್ಯ ಇಲಾಖೆ, ಮೊಟ್ಟೆ ಟೆಸ್ಟ್‌ಗೆ ಸೂಚನೆ!

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಎಂಬ ವದಂತಿ ಹಿನ್ನೆಲೆ ಜನರ ಆತಂಕ ದೂರು ಮಾಡೋಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಬ್ರ್ಯಾಂಡ್‌ಗಳ ಮೊಟ್ಟೆ ಟೆಸ್ಟ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಜೊತೆಗೆ ಕಳೆದ 6 ತಿಂಗಳ ಹಿಂದೆ ಆಹಾರ ಸುರಕ್ಷತಾ ಇಲಾಖೆ ಟೆಸ್ಟ್‌ನಲ್ಲಿ ಮೊಟ್ಟೆ ಸೇಫ್ ಅಂತ ಕೂಡ ವರದಿ ಬಂದಿದೆ. ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗ್ತಿರೋ ವಿಚಾರ ಅಂದರೆ ಅದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಅನ್ನೋ ವಿಚಾರ….

Read More

ಪೊಲೀಸ್ ಠಾಣೆಯೊಳಗೆ ಮೊಬೈಲ್ ಒಯ್ಯುವುದನ್ನು ತಡೆಯಲು ಯಾವುದೇ ಕಾನೂನಿಲ್ಲ!

​ಯಾರಾದರೂ ಪೊಲೀಸ್ ಠಾಣೆಗೆ ಹೋದಾಗ ಇಲ್ಲವೇ ಅಧಿಕಾರಿಗಳನ್ನು ಭೇಟಿ ಮಾಡುವಾಗ, “ಮೊಬೈಲ್ ಸ್ವಿಚ್ ಆಫ್ ಮಾಡಿ” ಇಲ್ಲವೇ “ಮೊಬೈಲ್ ಹೊರಗೆ ಇಟ್ಟು ಬನ್ನಿ” ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಹೀಗೆ ತಡೆಯಲು ಅವರಿಗೆ ಅಧಿಕಾರವಿದೆಯೇ? ​ಆರ್‌ಟಿಐ (RTI) ಅಡಿಯಲ್ಲಿ ಬಹಿರಂಗವಾದ ದಿಟ ಇಲ್ಲಿದೆ. ಮಾಹಿತಿ ಹಕ್ಕು ಅರ್ಜಿಗೆ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (DG & IGP) ಕಚೇರಿಯೇ ಅಧಿಕೃತವಾಗಿ ಬದಲು ನೀಡಿದೆ. “ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಕಚೇರಿ ಒಳಗಡೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಿ…

Read More

ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 2% ರಂತೆ ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ದಸಂಸ ಪ್ರತಿಭಟನೆ

ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕರಾದ ತರಿಕೆರೆ ವೆಂಕಟೇಶ್ ರವರು ಮಾತನಾಡಿ ಪರಿಶಿಷ್ಟ ಅಲೆಮಾರಿ ಸಮುದಾಯಗಳಾದ ಸಿಳ್ಳೆಕ್ಯಾತ, ಕೋಲೆಬಸವ, ಹಂದಿಜೋಗಿ, ದೊಂಬರ, ಸುಡುಗಾಡು ಸಿದ್ಧ, ಚನ್ನದಾಸ, ಕೊರಮ, ಕೊರಚ ಮುಂತಾದ ನಿರ್ಗತಿಕ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುಂಪು ಮಾಡಿ ಶೇ. 2% ರಷ್ಟಾದರೂ ಮೀಸಲಾತಿಯನ್ನು ಕೊಡಬೇಕಾಗಿತ್ತು. ಏಕೆಂದರೆ ಈ ಅಲೆಮಾರಿ ಸಮುದಾಯಗಳು ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೆ ಮರದ ಕೆಳಗೆ, ಪಾಳುಮಂಪಟಗಳಲ್ಲಿ ನೆಲೆಗಳೇ ಇಲ್ಲದೆ ಬೀದಿಯಲ್ಲಿ ಬದುಕನ್ನು ದೂಡುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಈ ಅಲೆಮಾರಿ…

Read More

ರಾಮದುರ್ಗ ಪ್ರೇಮದ ಹೆಸರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಬಜರಂಗದಳವತಿಯಿಂದ ಪೊಲೀಸ್ ಠಾಣೆಗೆ ಮನವಿ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆ ರಾಮದುರ್ಗ ಇವರಿಗೆ ವಿಶ್ವ ಹಿಂದೂ ಪರಿಷತ್ತಿನ ಬಜರಂಗದಳವತಿಯಿಂದ ಪ್ರೇಮದ ಹೆಸರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯಬೇಕೆಂದು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು. ರಾಮದುರ್ಗ ನಗರದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪ್ರೇಮದ ಹೆಸರಿನಲ್ಲಿ ಮನೆ ಬಿಟ್ಟು ಓಡಿ ಹೋಗುವ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲಾ-ಕಾಲೇಜುಗಳ ಹಾದಿಯಲ್ಲಿ ಅಲ್ಲಲ್ಲಿ ಗುಂಪಾಗಿ ನಿಂತು ಹುಡುಗಿಯರನ್ನು ಛೇಡಿಸುವ, ಜೋರಾಗಿ ಬೈಕ್ ಓಡಿಸುವ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರನ್ನು ಪುಸಲಾಯಿಸಿ ಅವರ ಬ್ರೈನ್ ವಾಶ್ ಮಾಡಿ ಓಡಿಸಿಕೊಂಡು…

Read More