ಗುರುಪೂರ್ಣಿಮೆಯ ನಿಮಿತ್ಯ ಗುರು ಸ್ವರೂಪಿ ಜಂಗಮರ ಹಾಗೂ ವಿವಿಧ ದೇವಸ್ಥಾನದ ಅರ್ಚಕರಿಗೆ ಪಾದಪೂಜೆ ಹಾಗೂ ಸತ್ಕಾರ ಕಾರ್ಯಕ್ರಮ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತೇರ ಬಜಾರದಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಸಮಸ್ತ ಭಕ್ತ ಮಂಡಳಿಯ ವತಿಯಿಂದ ಗುರುಪೂರ್ಣಿಮೆಯ ನಿಮಿತ್ಯ ಸತ್ಯನಾರಾಯಣ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಮದುರ್ಗ ನಗರದ ಗುರು ಸ್ವರೂಪಿ ಜಂಗಮರನ್ನು ಹಾಗೂ ವಿವಿಧ ದೇವಸ್ಥಾನಗಳ ಅರ್ಚಕರನ್ನು ಪಾದಪೂಜೆ ಮಾಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಸಂಗಮೇಶ ಉದಪುಡಿ ಸಂಗೀತ ಸೇವೆಯನ್ನು ಕೃಷ್ಣ ಕೊಳದೂರ ವಂದನಾರ್ಪಣೆಯನ್ನು H K ದಾಸರ ಅವರು ನೆರವೇರಿಸಿ ಕೊಟ್ಟರು ಆಶೀರ್ವಚನವನ್ನು ದಾಸ…
