ಹೈನುಗಾರಿಕೆ ಉತ್ತೇಜನೆಗೆ ಸರಕಾರ ಸದಾ ಬದ್ಧ: ಸಚಿವ ಕೆ. ವೆಂಕಟೇಶ್
ಬೆಳಗಾವಿ,ಗ್ರಾಮೀಣ ಭಾಗದಲ್ಲಿ ಜನರು ಹಸುಗಳನ್ನು ಸಾಕುವುದ ಮೂಲಕ ಹೈನುಗಾರಿಕೆಯನ್ನು ಕುಲ ಕಸುಬಾಗಿ ಮಾಡಿಕೊಂಡಿದ್ದು, ಸರಕಾರದ ವತಿಯಿಂದ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆ ನಿಮಿತ್ಯ ಏ.25 ನಗರದ…
