ಕಾಗವಾಡ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ತಂದೆಗೆ ₹25000 ದಂಡ ವಿಧಿಸಿದ ನ್ಯಾಯಾಧೀಶರು
ಸಾರ್ವಜನಿಕ ಸುರಕ್ಷತೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪೊಲೀಸರು ಅಳವಡಿಸಿರುವ ಎ.ಎನ್.ಪಿ.ಆರ್ (Automatic Number Plate Recognition Camera – ANPR) ತಂತ್ರಜ್ಞಾನವು ಇಂದು ಕಠಿಣ ಕಾನೂನು ಜಾರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಇತ್ತೀಚೆಗೆ ನಡೆದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣವೊಂದರಲ್ಲಿ, ಮಾನ್ಯ JMFC ನ್ಯಾಯಾಲಯ ಕಾಗವಾಡ, cc no 579/26 ಇದರಲ್ಲಿ ಸದರಿ ಅಪ್ರಾಪ್ತ ಬಾಲಕನ ತಂದೆಯಾದ ಮಕ್ರಂದ್ ಮಲ್ಲಪ್ಪ ಮಗದುಮ್ ಸಾಕಿನ್ ಮಂಗಸುಳಿ ಈತನು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ…
