ಅಥಣಿ ಕಲ್ಲು ಗಣಿಗಾರಿಕೆ ವಿರುದ್ಧ ಜಾನುವಾರುಗಳ ಸಮೇತ ಧರಣಿ
ಅಥಣಿ ಕಲ್ಲು ಗಣಿಗಾರಿಕೆಯ ಧೂಳಿನಿಂದ ತೀವ್ರ ತೊಂದರೆಗೀಡಾಗಿರುವ ಗಸ್ತಿ ಕುಟುಂಬ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬುಧವಾರ ಇಲ್ಲಿನ ಮಿನಿ ವಿಧಾನಸೌಧ ತಹಶೀಲ್ದಾರ್ಕಚೇರಿಯ ಆವರಣದಲ್ಲಿ ಜಾನುವಾರುಗಳ ಸಮೇತ ಧರಣಿ ನಡೆಸುತ್ತಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ತಮ್ಮ ಅಳಲು ತೋಡಿಕೊಂಡ ರಾಮಪ್ಪ ಗಸ್ತಿ ಕಳೆದ ಹತ್ತು ವರ್ಷಗಳಿಂದ ಕಲ್ಲು ಗಣಿಗಾರಿಕೆಯ ಧೂಳಿನಿಂದ ನಮ್ಮ ಕುಟುಂಬ ಹೈರಾಣಾಗಿದೆ, ಕುಟುಂಬದ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಗಣಿಗಾರಿಕೆಯಿಂದ ಬರುವ ಧೂಳಿನಿಂದ ನಮ್ಮ ಕುಟುಂಬವನ್ನು ರಕ್ಷಿಸುವಂತೆ…
