ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಮುನವಳ್ಳಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ -ಕಲೋತ್ಸವ ಕಾರ್ಯಕ್ರಮ
ಮಕ್ಕಳಲ್ಲಿರುವ ಪ್ರತಿಭೆ, ಕಲೆ , ಸಾಹಿತ್ಯಿಕ ಕೌಶಲ್ಯಗಳನ್ನು ಪ್ರದರ್ಶಿಸಲು “ಪ್ರತಿಭಾ ಕಾರಂಜಿ -ಕಲೋತ್ಸವ “ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದ್ದು,ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ ಎ ಖಾಜಿ ರವರು ಕರೆನೀಡಿದರು. ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಮುನವಳ್ಳಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ “ಪ್ರತಿಭಾ ಕಾರಂಜಿ -ಕಲೋತ್ಸವ”ಕಾರ್ಯಕ್ರಮ ಉದ್ಘಾಟಿಸಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.ಅಲ್ಲದೇ ಸದರಿ ಕಾರ್ಯಕ್ರಮವು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು,ಇದ್ದ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಕರೆ ನೀಡಿದರು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ…
