ಶಾಸಕ ಜಿ. ಎಸ್. ಪಾಟೀಲ್ಗೆ ಸಚಿವ ಸ್ಥಾನಕ್ಕಾಗಿ ನಿಡಗುಂದಿಯಲ್ಲಿ ವಿಶಿಷ್ಟ ಹರಕೆ: ಸುಡುಬಿಸಿಲಿನಲ್ಲಿ ‘ದಿಡ ನಮಸ್ಕಾರ’ ಹಾಕಿದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ ಡುಮ್ಮಣ್ಣವರ
ಗದಗ ಜಿಲ್ಲೆ ರೋಣ ಮತಕ್ಷೇತ್ರದ ಜನಪ್ರಿಯ ಹಾಗೂ ಹಿರಿಯ ಶಾಸಕರಾದ ಜಿ. ಎಸ್. ಪಾಟೀಲ್ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ, ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ ವೀರಬಸಪ್ಪ ಡುಮ್ಮಣ್ಣವರ ಅವರು ಗ್ರಾಮದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ದಿಡ ನಮಸ್ಕಾರ (ದಂಡ ನಮಸ್ಕಾರ) ಹಾಕುವ ಮೂಲಕ ವಿಶಿಷ್ಟ ಹರಕೆ ಸಲ್ಲಿಸಿದರು. ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನದಿಂದ ಭೀಮಾಂಬಿಕ ದೇವಸ್ಥಾನದ ವರೆಗೆ ಮಂಗಲ ವಾದ್ಯಗಳು, ಡೊಳ್ಳು…
