ರಾಮದುರ್ಗ ಟೌನ್ ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ಸಾರ್ವಜನಿಕರಿಂದ ಪ್ರಧಾನ ಅಂಚೆ ಕಚೇರಿಗೆ ಮನವಿ.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ಮುಂದೆ ಇರುವ ವಾಣಿಜ್ಯ ಮಲ್ಲಿಗೆಗಳ ನಂ.5 ರಲ್ಲಿ ಇದ್ದಂತಹ ರಾಮದುರ್ಗ ಟೌನ್ ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ಸಾಮಾಜಿಕ ಹೋರಾಟಗಾರರು ರಾಮದುರ್ಗ ಪ್ರಧಾನ ಅಂಚೆ ಕಚೇರಿಗೆ ಮನವಿಯನ್ನು ಸಲ್ಲಿಸಿದರು. ರಾಮದುರ್ಗ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯನ್ನು ಇವಾಗ ರಾಮದುರ್ಗದ ಹೆಡ್ ಪೋಸ್ಟ ಆಫೀಸಗೆ (ಅಂಚೆ ಕಚೇರಿಯೊಂದಿಗೆ) ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾವನೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಅಂಚೆ ಕಚೇರಿಯು ನಮ್ಮ ರಾಮದುರ್ಗ ಪಟ್ಟಣದ ನೂರಾರು…
