ಹಿರೇನಂದಿಹಳ್ಳಿ ಕ್ರಾಸ್ ಬಳಿ ಜಮೀನವೊಂದರಲ್ಲಿ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿ, ಚನ್ನಮ್ಮನ ಕಿತ್ತೂರು : ಸಮೀಪದ ಹಿರೇನಂದಿಹಳ್ಳಿ ಕ್ರಾಸ್ ಬಳಿ ಜಮೀನವೊಂದರಲ್ಲಿ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂದಾಜು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ.ಸುಮಾರು 5 ರಿಂದ 6 ದಿನಗಳ ಹಿಂದೆ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿಯ ವ್ಯಾಪ್ತಿಯ ಗೋವಿನ ಜೋಳದ ಜಮೀನಿನಲ್ಲಿ ಒರ್ವ ವ್ಯಕ್ತಿಯನ್ನು ಕೊಲೆ ಮಾಡಿ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಕೆ. ರಾಮರಾಜನ್, ಡಿವೈಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ…
