ಪಿಗ್ರಿ ಏಜೆಂಟ್‌ಗಳ ಕಮೀಷನ್ ಮೇಲೆ ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು: ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹಿಸುವ ಪಿಗ್ನಿ ಏಜೆಂಟ್‌ಗಳು ಬ್ಯಾಂಕಿನ ನೌಕರರಾಗಿದ್ದು, ಅವರಿಗೆ ನೀಡಲಾಗುವ ಸಂಭಾವನೆ ಅಥವಾ ಕಮೀಷನ್ ಮೇಲೆ ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪಿಗ್ನಿ ಏಜೆಂಟ್‌ಗಳಿಗೆ ಪಾವತಿಸಿದ ಕಮಿಷನ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸುವಂತೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಬ್ಯಾಂಕುಗಳು ಈ ಏಜೆಂಟ್‌ಗಳ ಮೇಲೆ ಸಂಪೂರ್ಣ…
