ಗುಟ್ಕಾ ಉಗಿಯಲು ಬಸ್ನ ಕಿಟಕಿ ಆಚೆ ತಲೆ ಹಾಕಿದ್ದಾಗ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದು ರುಂಡ ಕಟ್!
ಧಾರವಾಡ ಜಿಲ್ಲೆ ಹುಬ್ಬಳ್ಳಿ -ಲಕ್ಷ್ಮೀಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿಕುಂದಗೋಳ ಚಲಿಸುವ ಬಸ್ನ ಕಿಟಕಿ ಯಿಂದ ಹೊರಗೆ ತಲೆ ಹಾಕಿದ್ದ ವಿದ್ಯಾರ್ಥಿಯೊಬ್ಬನಿಗೆಹಿಂಬ ದಿಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿ ಆತನ ರುಂಡವೇ ಕಟ್ ಆಗಿ ಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದು ಕೊಂಡಿರುವ ಘಟನೆ ಹುಬ್ಬಳ್ಳಿ -ಲಕ್ಷ್ಮೀಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ ಬುಧವಾರ ಸಂಜೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಫಕ್ಕೀರೇಶ ಮುತ್ತಳ್ಳಿಮಠ ವಯಸ್ಸು 17 ಎಂದು ಗುರುತಿಸಲಾಗಿದೆ….
