ಆನೆಗುದ್ದಿ : ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಗುದ್ದಿ ಗ್ರಾಮ ಹದ್ದಿಯ ಲಕ್ಷ್ಮಣ್ ಬೊರ್ಜಿ ಅವರ ಹೊಲದ ಹತ್ತಿರ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಹಿತಿ ತಿಳಿದ ತಕ್ಷಣ ರಾಮದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಹಜರು ಪ್ರಕ್ರಿಯೆಗಳನ್ನು ನಡೆಸಿರುತ್ತಾರೆ. ಮೃತ : ಉದಯ ಗಂಗಪ್ಪ ಚಿಕ್ಕವೀರಣ್ಣವರ ವಯಸ್ಸು 35 ಸಾ : ಕುರಗುಂದ ತಾಲೂಕ ಬೈಲಹೊಂಗಲ ಪಿರ್ಯಾದಿ : ಬಸವರಾಜ್ ಗಂಗಪ್ಪ ಚಿಕ್ಕವೀರಣ್ಣವರ ವಯಸ್ಸು 30 ಸಾ : ಕುರಗುಂದ…
ಸವದತ್ತಿ ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ.
ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 12-08-2026 ರಂದು ಶ್ರೀ. ಜಿ.ಜಿ.ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು. ಸಹಾಯಕ ಸರ್ಕಾರಿ ಅಭಿಯೋಜಕರಾದ ಎಮ್.ಎಸ್.ಸನ್ನಲಿಂಗನವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟನೆ ನೆರವೇರಿಸಿದರು ನಂತರ ಮಾತನಾಡಿದ ಅವರು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಚಿಸಿಕೊಂಡಂತಹವುಗಳೇ ಕಾನೂನುಗಳು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಪ್ರಾಥಮಿಕ ಹಂತದಲ್ಲಿ…
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ₹2.76 ಕೋಟಿ ಬೃಹತ್ ಹಗರಣ: ಮಾಜಿ ಬಿಬಿಎಂಪಿ ನಾಯಕ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು!
ಇದೇ M/s N.S. Enterprises ಸಂಸ್ಥೆಯು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ ಗಣಕಯಂತ್ರ ಹಾಗೂ ಪ್ರಿಂಟರ್ ಸರಬರಾಜು ಹೆಸರಿನಲ್ಲಿ ಸುಮಾರು ₹9 ಕೋಟಿ ವಂಚಿಸಿದೆ ಎಂದು ಕಳೆದ ವಾರವಷ್ಟೇ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈಗ ಅದೇ ಬೇನಾಮಿ ಸಂಸ್ಥೆಯ ಮೂಲಕ ಪಶ್ಚಿಮ ನಗರ ಪಾಲಿಕೆಯಲ್ಲೂ ಕೋಟ್ಯಂತರ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಐಜಿಪಿಗೆ ದೂರು – ಕಠಿಣ ಕ್ರಮಕ್ಕೆ ಆಗ್ರಹ!ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ನಕಲಿ ದಾಖಲೆ ಸೃಷ್ಟಿ ಹಾಗೂ ಸಾರ್ವಜನಿಕರ ತೆರಿಗೆ ಹಣ…
ನಂಬರ್ ಪ್ಲೇಟ್ ಇಲ್ಲದೆ ವಾಹನ ಸವಾರರ ವಿರುದ್ಧ ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಐ ಕ್ಯಾಮೆರಾಗಳ ತಪ್ಪಿಸಲು ನಂಬರ್ ಪ್ಲೇಟ್ ಗೆ ಸ್ಟಿಕರ್ ಅಂಟಿಸಿ ಓಡಾಡುವರು ಮತ್ತು ನಂಬರ್ ಪ್ಲೇಟ್ ಇಲ್ಲದೆ ಗಾಡಿ ಓಡಾಡಿಸುವವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಯಿತು ಎಂದುಪಿಎಸ್ಐ ಸವಿತಾ ಮುನ್ಯಾಳ ಹೇಳಿದರು ಕೆಲವರು ಇ-ಚಲನ್ಗಳನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಅವುಗಳನ್ನು ಮರೆಮಾಡುತ್ತಾರೆ.ಪೊಲೀಸ್ ಕ್ರಮದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತಾರೆ.ಉದ್ದೇಶಪೂರ್ವಕವಾಗಿ ದೋಷಯುಕ್ತ ಅಥವಾ ವಿರೂಪಗೊಂಡ ನಂಬರ್ ಪ್ಲೇಟ್ಗಳನ್ನು ಬಳಸುವವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ…
ಕಾರ್ಮಿಕರ ಬೇಡಿಕೆಗಳ ಕೂಡಲೇ ಈಡೇರಿಸಬೇಕೆಂದು ಪ್ರತಿಭಟನೆ ಮುಖಾಂತರ ಮಾನ್ಯ ತಹಸೀಲ್ದಾರ್ ಅವರ ಮೂಲಕ ಮನವಿ.
ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಕಾರ್ಮಿಕ ಮಂಡಳಿಯಿಂದ ನೈಜವಾಗಿ ಸಿಗುವ ಸೌಲಭ್ಯಗಳಿಂದ ಕಾರ್ಮಿಕರೆಲ್ಲರೂ ವಂಚಿತರಾಗುತ್ತಿದ್ದಾರೆ, ಹಾಗೂ ಕಟ್ಟಡ ಕಾರ್ಮಿಕರ ನೊಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಮಕ್ಕಳಿಗೆ ಸಾಮಾಜಿಕ ಭದ್ರತೆಗಳ ಅಡಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಳೆದ ಎರಡು ಮೂರು ವರ್ಷಗಳಿಂದ “ಡಿ ಬಿ ಟಿ” ಮುಖಾಂತರ ವಿಳಂಬವಾಗಿ ಹಣ ಜಮೆ ಆಗುತ್ತಿವೆ. ಹೀಗಾಗಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಬ್ಯಾಂಕ್ ಖಾತೆಗೆ ಹಣ ಜಮಾ…
ಜಹೂರಬಾಷಾ ಕಲೆಗಾರ ಅವರಿಗೆ ಪಿಎಚ್ಡಿ ಪ್ರದಾನ: ಶಾಸಕ ಅಶೋಕ್ ಪಟ್ಟಣ್ ಅವರಿಂದ ಸನ್ಮಾನ
ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಿವಾಸಿ ಹಾಗೂ ಗೊಣ್ಣಾಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಜಹೂರಬಾಷಾ ಕಲೆಗಾರ ಅವರಿಗೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಪಟ್ಟಣ್ ಅವರು ಜಹೂರಬಾಷಾ ಕಲೆಗಾರ ಅವರನ್ನು ಸನ್ಮಾನಿಸಿ, ಅವರ ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಡಿ.ಜಿ. ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ…
ಕಟಕೋಳ ಗ್ರಾಮದಲ್ಲಿ ಉಪಯೋಗವಿಲ್ಲದ ಸ್ವಚ್ಛ ವಾಹಿನಿ ವಾಹನ! ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಬಿ. ಬೈಲವಾಡ ಅವರ ನಿರ್ಲಕ್ಷತೆ ಕಾರಣವಾಗಿದೆ.
ಕಟಕೋಳ ಸ್ವಚ್ಛತಾ ವಾಹನಗಳು ಬಳಕೆಯಾಗದೆ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆ ಮನೆಯಿಂದ ಒಣ, ಹಸಿ ಕಸ ಹಾಕಲು ಗ್ರಾಮ ಪಂಚಾಯಿತಿಗಳಿಗೆ ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ನಿಂತು ತುಕ್ಕು ಹಿಡಿಯುತ್ತಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮ ಪಂಚಾಯತಿಯ KA 69 0590 ಸ್ವಚ್ಛ ವಾಹಿನಿ ವಾಹನವು ಸುಮಾರು ಎರಡು ವರ್ಷದಿಂದ ಕಟಕೋಳದ ಪಶು ಆಸ್ಪತ್ರೆಯ ಪಕ್ಕದಲ್ಲಿ ನಿಂತಿರುತ್ತದೆ.ಹಾಗೂ ಈ…
ಚಿಕ್ಕೋಡಿ : ಅಕ್ರಮ ಸಂಬಂಧಕ್ಕೆ ಗಂಡನನ್ನು ಕೊಲೆಗೈದ ಹೆಂಡತಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಘಟನೆ ನಡೆದಿದೆ. ಸುಮಾರು 6 ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಕಿರಾತಕಿ ಪತ್ನಿ. ರಾಘು ಗಾವಡೆ (40) ಹೆಂಡತಿಯಿಂದಲೇ ಕೊಲೆಯಾದ ದುರ್ದೈವಿ ಪತಿ. ಬಂಗಾರಿ ಗಾವಡೆ ಕೊಲೆ ಮಾಡಿದ ಪತ್ನಿ, ರಾಮಾ ರಾಣಗೆ ಆಕೆಯ ಪ್ರಿಯಕರ. ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ಖಡಕಲಾಟ ಠಾಣೆಯ ಪೊಲೀಸರು….
ರಾಮದುರ್ಗ ತಾಲೂಕಿನಲ್ಲಿ ಉಂಟಾಗಿರುವ ಭೀಕರ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಸರ್ಕಾರದ ನೆರವು ನೀಡುವಂತೆ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ರಾಮದುರ್ಗ ತಾಲೂಕಿನಲ್ಲಿ ಈ ವರ್ಷ ಮಳೆ ಕೊರತೆಯಿಂದಾಗಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದರೂ, ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗುವ ಪರಿಸ್ಥಿತಿ ಎದುರಾಗಿದೆ. ರೈತರು ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಇತರ ಕೃಷಿ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಇದೀಗ…
ರಾಮದುರ್ಗದಲ್ಲಿ ಸಪ್ಟೆಂಬರ್ 12 ರಂದು ಅಂತರಾಷ್ಟ್ರೀಯ ಲೋಕ ಅದಾಲತ್ : ಹಿರಿಯ ದಿವಾಣಿ ನ್ಯಾಯಾಧೀಶರು ಶ್ರೀಮತಿ. ಪುಷ್ಪಲತಾ. ಕೆ
ಅಂತರಾಷ್ಟ್ರೀಯ ಲೋಕ ಅದಾಲತ್ ಹಾಗೂ ವಿವಿಧ ವಿಷಯಗಳ ಕುರಿತು ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗದಲ್ಲಿ ಸಭೆ ಕರೆಯಲಾಗಿತ್ತು ಸಭೆಗೆ ಸಮಯಕ್ಕೆ ಸರಿಯಾಗಿ ಬರದೇ ಇರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮುಂದಿನ ಸಭೆಯಲ್ಲಿ ಸಮಯಕ್ಕೆ ಸರಿಯಾಗಿ ಬರಬೇಕೆಂದು ಅಧಿಕಾರಿಗಳಿಗೆ ರಾಮದುರ್ಗ ದಿವಾಣಿ ನ್ಯಾಯಾಧೀಶರು ಶ್ರೀಮತಿ ಭಾಗ್ಯಶ್ರೀ ಮಾದರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು ರಾಮದುರ್ಗ : ರಾಜಿ ಆಗಬಹುದಾಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಪ್ಟೆಂಬರ್ 12 -2026 ರಂದು ರಾಮದುರ್ಗ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ…
