ಬೆಳವಣಿಕಿಯಲ್ಲಿ ಆತಂಕ: ಸಿಎಲ್-2 ಬಾರ್ಗಳಲ್ಲೇ ಓಪನ್ ಮದ್ಯ ಸೇವನೆ, ಗಲ್ಲಿಗಲ್ಲಿಗಳಲ್ಲಿ ಮಟ್ಕಾ ಹಾವಳಿ!
ಡಬ್ಬಿ ಅಂಗಡಿ, ಎಗ್ರೈಸ್ ಸೆಂಟರ್, ಡಾಬಾಗಳಿಗೆ ಸಗಟು ಬಾಕ್ಸ್ಗಳ ಮದ್ಯ ಸಾಗಾಟದ ಗಂಭೀರ ಆರೋಪ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ತ್ವರಿತ ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ. ರೋಣ ತಾಲೂಕಿನ ಪ್ರಮುಖ ವ್ಯಾಪಾರ ಹಾಗೂ ಐತಿಹಾಸಿಕ ಕೇಂದ್ರವಾದ ಬೆಳವಣಿಕಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಜೂಜಾಟದ ಚಟುವಟಿಕೆಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿವೆ. ಗ್ರಾಮದ ರೋಣ ರಸ್ತೆಯಲ್ಲಿರುವ ‘ಎಲ್.ವಿ ವೈನ್ಸ್’ ಮಳಿಗೆ ಸೇರಿದಂತೆ ಚಿಲ್ಲರೆ ಮದ್ಯ ಮಾರಾಟದ ಸನ್ನದು (CL-2) ಹೊಂದಿರುವ…
ಬೆಳಗಾವಿ ಕನಕ ನೌಕರರ ಸಂಘದ 2025-26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ
ಕನಕ ನೌಕರರ ವಿವಿದ್ದೋಷಗಳ ಹಾಗೂ ಶ್ರೈಕ್ಷನಿಕ್ ಸಹಕಾರ ಸಂಘ. ನಿಯಮಿತ ಬೆಳಗಾವಿ. ದಿನಾಂಕ 6-9-2026 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಕನಕ ನೌಕರರ ಸಂಘದ2025,26 ನೆಯ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಈ ಸಂದರ್ಭದಲ್ಲಿ ಕನಕ ನೌಕರರ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಜಿತಕುಮಾರ ಬಿರಾದಾರ ಅವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಮತಿ ರೇಖಾ ದಳವಾಯಿ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಫೌಂಡರ್ ಅಧ್ಯಕ್ಷರು ಮಾಜಿ ಶ್ರೀ ಶಿವಪ್ಪ ಕಾಡಮ್ಮನವರ ಹಾಗೂ ಸತತವಾಗಿ 10 ವರ್ಷಗಳ ಕಾಲ…
ಭಾರತಿ ಪಾಟೀಲ ಅವರಿಗೆ ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ ಪ್ರಧಾನ
ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯ, ಚವಾಟ ಗಲ್ಲಿ ಶಾಖೆಯ ಪ್ರಭಾರಿ, ಶ್ರೀಮತಿ ಭಾರತಿ ಪಾಟೀಲ ಅವರಿಗೆ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಗ್ರಂಥಪಾಲಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಉತ್ತಮ ಗ್ರಂಥಪಾಲಕ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಮಧು ಬಂಗಾರಪ್ಪ,ಮಾನ್ಯ ಸಚಿವರು,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕರ್ನಾಟಕ ಸರ್ಕಾರ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಪದ್ಮಶ್ರೀ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮ ದಿನಾಚರಣೆ ನಿಮಿತ್ತ, ಕರ್ನಾಟಕ ಸರ್ಕಾರ,ಸಾರ್ವಜನಿಕ ಗ್ರಂಥಾಲಯ ಇಲಾಖೆ,ವತಿಯಿಂದ ಬೆಂಗೂರಿನಲ್ಲಿ ನಡೆದ ರಾಜ್ಯಮಟ್ಟದ…
ಶಿವಮೊಗ್ಗ ಕಾರಿನಲ್ಲಿ 21 ಕೆಜಿ ಜಿಂಕೆ ಮಾಂಸ. ಆರೋಪಿಗಳು ಎಸ್ಕೇಪ್.!
ದಿನಾಂಕ 04-09-2026 ರಂದು, ಅರಣ್ಯ ಘಟಕ ಮಡಿಕೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ಸಿಂಗ್ ರವರ ಮಾರ್ಗದರ್ಶನದಲ್ಲಿ, ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕ ಹಾಗೂ ಸಿಬ್ಬಂದಿಗಳು, ಹೊಸನಗರದ ರಿಪ್ಪನ್ ಪೇಟೆಯ ಬರುವೆ ರಸ್ತೆ ಬಳಿ ದಾಳಿ ಮಾಡಿ, ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿದ್ದ 21 kg ಜಿಂಕೆ ಮಾಂಸ ವಶಪಡಿಸಿಕೊಂಡಿದ್ದಾರೆ. ಎರ್ಟಿಗಾ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರು ಆರೋಪಿಗಳು A1, ಗುರುರಾಜ S/o ನರಸಿಂಹನಾಯ್ಕ, ಬರುವೆ-ವಾಸಿ A2, ಗಣೇಶ ತಂದೆ ಗೋಪಾಲ, ಕಡಡಿಗ ವಾಸಿ…
ಶ್ರೀ ಜಿ. ಜಿ. ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜು ಸವದತ್ತಿ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಣೆ
ಸವದತ್ತಿ : ವಿದ್ಯಾರ್ಥಿಗಳು ತಮ್ಮ ಸ್ಪಷ್ಟ ಗುರಿಗಳೊಂದಿಗೆ ಉಪನ್ಯಾಸಕರ ಸೂಕ್ತ ಮಾರ್ಗದರ್ಶನದೊಂದಿಗೆ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ. ಇಂದಿನ ದಿನಗಳಲ್ಲಿ ಶಕ್ತಿ ಮತ್ತು ಸಂಪತ್ತಿಗಿಂತ ವಿದ್ಯೆಗೆ ಹೆಚ್ಚಿನ ಆದ್ಯತೆ ಇದೆ ಎಂದುಮುಖ್ಯ ಅತಿಥಿಗಳಾದ ಐ. ಎಂ. ಅಂಬಿ ಅವರು ಸವದತ್ತಿಯ ಶ್ರೀ ಜಿ ಜಿ ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ಡಾ. ಎಸ್ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಅತಿಥಿಗಳಾದ ಆರ್. ಸಿ. ಬಾರಾಟಕ್ಕೆ ಮಾತನಾಡಿ ವಿದ್ಯಾರ್ಥಿಗಳು ಡಾ ….
ವಿಬಿಜಿ ರಾಮ್ಜಿ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ದೊರೆತ 14 ನಿಧಿ ನಾಣ್ಯಗಳನ್ನು ಇಂಚಲ ಗ್ರಾಪಂ ಕಾರ್ಯಾಲಯಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ ಘಟನೆ ನಡೆದಿದೆ.
ಚಿತ್ರದಲ್ಲಿರುವ ನಾಣ್ಯಗಳು ಗಂಗರ ಕಾಲದ ತಲಕಾಡಿನ ಪಶ್ಚಿಮ ಗಂಗರು ಅಥವಾ ವಿಜಯನಗರ ಸಾಮ್ರಾಜ್ಯ ಕಾಲದ ಚಿನ್ನದ ನಾಣ್ಯಗಳಾಗಿವೆ. ‘ಗಜಪತಿ ವರಹ,’ವರಹ, ಪಗಡ ನಾಣ್ಯಗಳು ಇವೆ.ನಾಣ್ಯಗಳ ಮೇಲ್ಭಾಗದಲ್ಲಿ ಅಲಂಕೃತಗೊಂಡ ಆನೆಯ ಚಿತ್ರವಿದೆ. ಗಂಗರ ರಾಜಲಾಂಛನವು ಮದಜಲ ಸುರಿಸುವ ಆನೆಯಾಗಿದ್ದು, ಇವುಗಳನ್ನು ‘ಗಜಪತಿ ಗದ್ಯಾಣ ಗಜಪತಿ ವರಹ ಎಂದು ಕರೆಯಲಾಗುತ್ತಿತ್ತು.ಸುಮಾರು ಕ್ರಿ.ಶ. 10ನೇ ಶತಮಾನದಿಂದ 15ನೇ ಶತಮಾನದ ಮಧ್ಯಕಾಲೀನ ಕರ್ನಾಟಕ ಅವಧಿಗೆ ಸೇರಿದವು. ಇವು ಅಪರಂಜಿ ಚಿನ್ನದ ನಾಣ್ಯಗಳಾಗಿವೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದ ಬಿ.ಸಿ.ಎಂ. ಹಾಸ್ಟೆಲ್…
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಸಾಯಿಖಾನೆಗಳ ಕಾರ್ಯಾಚರಣೆ ಆರೋಪ – ಕ್ರಮಕ್ಕೆ ಆಗ್ರಹಿಸಿ ಮನವಿ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಕೆಲವೆಡೆ ಕಾನೂನು ಉಲ್ಲಂಘಿಸಿ ಕಸಾಯಿಖಾನೆಗಳ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ನ ಕಾರ್ಯಕರ್ತರು ಜಂಟಿಯಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗೋಹತ್ಯೆ ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಗೋವುಗಳ ಸಾಗಾಟ ನಡೆಯುತ್ತಿದ್ದರೆ ಅದನ್ನು ತಡೆಯಬೇಕು. ಇಂತಹ ಚಟುವಟಿಕೆಗಳಿಗೆ ಸಹಕರಿಸುವವರ…
ಶ್ರೀ ಕೃಷ್ಣ ಹಾಗೂ ಕರ್ಣನ ನಡುವೆ ನಡೆದ ಈ ಸಂಭಾಷಣೆ ಕೇಳಿದರೆ ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.
ಕಷ್ಟ ಯಾರ ಜೀವನದಲ್ಲಿ ಇಲ್ಲ ಹೇಳಿ.. ಆದರೆ ಕಷ್ಟಗಳನ್ನು ಕಷ್ಟ ಎಂದುಕೊಳ್ಳುವುದೇ ದೊಡ್ಡ ತಪ್ಪು.. ಕರ್ಣ ತನ್ನ ಕಷ್ಟಗಳನ್ನು ಕೃಷ್ಣನಿಗೆ ಹೇಳಿಕೊಂಡಾಗ.. ಕೃಷ್ಣ ಕರ್ಣನಿಗೆ ಹೇಳಿದ ಒಂದಿಷ್ಟು ಸಂದೇಶಾತ್ಮಕ ಮಾತುಗಳು:-ಅಂದು ಕರ್ಣ ಕೃಷ್ಣನಿಗೆ ಹೇಳಿದ, “ನನ್ನ ಬದುಕೇ ಒಂದು ಅಗ್ನಿಕುಂಡ. ಸಾಮಾಜಿಕ ವಲಯದಲ್ಲಿ ಒಂದು ಮುಳ್ಳಿನ ಬೇಲಿ. , ನನ್ನ ಹುಟ್ಟು ?ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತ ಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು.ತಾಯಿಯ ತನ್ನ ಕೂತುಹಲದ ಪರೀಕ್ಷೆಗಾಗಿ,ಅಕ್ರಮ ಸಂತಾನವಾಗಿ, ಹುಟ್ಟಿದ್ದು ನನ್ನ ತಪ್ಪೆ?” “ಸೂತಕುಲ, ಬಡಬಗ್ಗರ…
ಬಸವಣ್ಣನವರು ಪಾರದರ್ಶಕ ನಾಯಕ. ಯು ಎಸ್ ಸಂಗನಾಳಮಠ.
ಬೆಳಗಾವಿ ನಾವು ಸಮಾಧಾನವಾಗಿರಬೇಕು ನಾನು ಎಂಬುದು ತೆಗೆದು ನಾವು ಆಗಬೇಕು ಕೇಳಬಾರದನ್ನ ಕೇಳುತ್ತಾ ನೋಡಬಾರದು ನೋಡಿದರೆ ಆಗಬಾರದು ಆಗುತ್ತೆ ನನಗೆ ಸಂಯಮ ಜೀವನ ಅಗತ್ಯ. ನಡೆ ನುಡಿ. ಒಂದಾಗಬೇಕು. ತನ್ನನ್ನು ತಾನು. ಅರ್ಪಿಸಿಕೊಂಡು. ಶರಣಾಗತಿ ಆಗಬೇಕು. ವೈಚ್ಚಾರಿಕವನ್ನು ಬುದ್ಧ ನೀಡಿದರು. ಆರನೆಯ ಶತಮಾನ ಪಾಲಿಭಾಷೆಯಲ್ಲಿ. ಬುದ್ಧಂ ಶರಣಂ ಗಚ್ಛಾಮಿ ದಯೆ, ಅಂಹಿಸೆ ,ಇದೆ.ಸಮಾಜ ಎಚ್ಚರಿಸಲು ಬುದ್ಧ ಬಸವ ಬಂದರು.ಬಸವಣ್ಣನವರನ್ನು ಪಾರದಶ೯ಕ ನಾಯಕ ಎಂದು ಕರೆದರು.ಪಾರದಶ೯ಕ ನಡಾವಳಿಗಳು ತಂದು ವಿಶ್ವ ಗುರುವಾದರು ಎಂದು ಸಂಗನಾಳಮಠ ಅವರು ಇಂದು ತನ್ಮಯ…
ಬಸವರಾಜ ಕರೆಪ್ಪಗೊಳ ಅವರಿಗೆ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ ಆಂಗ್ಲ ಭಾಷೆ ಶಿಕ್ಷಕ ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಸನ್ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಸ್ಥಳೀಯ ವಿದ್ಯಾಲಯದ ಹೈಸ್ಕೂಲ್ ವಿಭಾಗದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದ್ಯಸರು ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಬಸವರಾಜ ಕರೆಪ್ಪಗೊಳ ಅವರ ಸಾಧನೆ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
